
ಕಳಸ ಲೈವ್ ವರದಿ
ಕಳಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಕರ್ನಾಟಕ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಂ. ಎಸ್. ಮಹಾಬಲೇಶ್ವರ ರವರು ಭಾನುವಾರ ಬೇಟಿ ನೀಡಿದರು.
ಈ ಸಂದರ್ಭದಲ್ಲಿ ಕಳಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮತ್ತು ಅಭಿವೃದ್ಧಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಎಂ.ಎಸ್ ಮಹಾಬಲೇಶ್ವರವರು ಕರ್ನಾಟಕ ಬ್ಯಾಂಕ್ ನಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾಗ ಕಳಸ ತಾಲೂಕಿಗೆ ನೀಡಿದ ಕೊಡುಗೆಯ ಬಗ್ಗೆ ಸಂಘದ ಅಧ್ಯಕ್ಷ ಜಿ.ಕೆ.ಮಂಜಪ್ಪಯ್ಯ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಸಂಘದ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ಎಂ.ಎಸ್ ಮಹಾಬಲೇಶ್ವರವರನ್ನು ಆತ್ಮೀಯವಾಗಿ ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಆಶಾಲತಾ ಡಿ ಜೈನ್, ನಿರ್ದೇಶಕರಾದ ಶ್ರೀ ಎ. ಆರ್. ಸತೀಶ್ಚಂದ್ರ, ಶ್ರೀ ಕೆ. ಆರ್ ರವಿಕುಮಾರ್, ಶ್ರೀ ಅನಿಲ್ ಗೆವಿನ್ ಡಿಸೋಜ, ಬ್ಯಾಂಕಿನ ಸಿಇಓ ಪಿ.ಮಹಾಬಲೇಶ್ವರ, ಸಂಘದ ಸದಸ್ಯರಾದ ಶ್ರೀ ರುದ್ರಯ್ಯಚಾರ್, ಶ್ರೀ ಕೆ. ಕೆ ಬಾಲಕೃಷ್ಣ ಭಟ್, ಶ್ರೀ ಎಂ. ಎ. ಶೇಷಗಿರಿ, ಶ್ರೀ ರತ್ನರಾಜು, ಶ್ರೀ ಅಜಿಜ್, ಶ್ರೀ ಕ್ರಷ್ಣಗೌಡ ಇತರರು ಇದ್ದರು