
ಕಳಸ ಲೈವ್ ವರದಿ
ವಿ.ಆರ್.ಫ್ರೆಂಡ್ಸ್ ಇವರ ಆಶ್ರಯದಲ್ಲಿ ನಡೆದ ವರಮಹಾಲಕ್ಷ್ಮೀ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಚಾಂಪಿಯನ್ ಆಗಿ ಸುಜಿತ್ ಬೆಳ್ಳ ಮಾಲಿಕತ್ವದ ಬೆಳ್ಳ ಕ್ರಿಕೆಟರ್ಸ್ ಚಾಂಪಿಯನ್ ಆಗಿದ್ದಾರೆ.
ಎರಡು ದಿನಗಳ ಕಾಲ ಸಂಸೆಯಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಒಟ್ಟು 12 ತಂಡಗಳು ಸ್ಪರ್ಧೆಗೆ ಇಳಿದಿದ್ದವು.
ಅಂತಿಮವಾಗಿ ಬೆಳ್ಳ ಕ್ರಿಕೆಟರ್ಸ್ ವಿನ್ನರರ್ಸ್ ಆಗಿ 50000 ಸಾವಿರ ನಗದು ಹಾಗೂ ಟ್ರೋಫಿಯನ್ನು ಪಡೆದುಕೊಂಡರೆ, ರನ್ನರ್ಸ್ ಆಗಿ ಶಬರಿಗಿರಿ ಬಾಳೂರು 30000 ನಗದು ಟ್ರೋಫಿ, ತೃತೀಯ ಬಹುಮಾನವನ್ನು ರಾಯಲ್ ಸ್ಟ್ರೈಕರ್ಸ್ 10000 ನಗದು ಮತ್ತು ಟ್ರೋಫಿ, ನಾಲ್ಕನೇ ಬಹುಮಾನವನ್ನು ವರಮಹಾಲಕ್ಷ್ಮೀ ಸಂಸೆ 5000 ನಗದು ಮತ್ತು ಟ್ರೋಫಿಯನ್ನು ಪಡೆದುಕೊಂಡರು.