

ಕಳಸ ಲೈವ್ ವರದಿ
ನೆಲ್ಲಿಬೀಡು ಮಂಜುನಾಥ್ ಮತ್ತು ಶಶಿಕಲಾ ದಂಪತಿಗಳ ಪುತ್ರಿ ನೀಕ್ಷಾ.ಹೆಚ್.ಎಮ್ ಅವರಿಗೆ ಗೋಲ್ಡ್ ಮೆಡಲ್ ನೀಡಿ ಗೌರವಿಸಲಾಗಿದೆ.
ಉಜಿರೆಯ ಶ್ರೀ ಕ್ಷೇತ್ರ ಧರ್ಮಸ್ಥಳ ಕಾಲೇಜಿನಲ್ಲಿ “ಡಿಜಿಟಲ್ ಮೀಡಿಯಾ ಅಂಡ್ ಫಿಲಂ ಮೇಕಿಂಗ್” ನಲ್ಲಿ ಪದವಿ ಮುಗಿಸಿರುವ ಇವರು ಸತತವಾಗಿ 3 ವರ್ಷಗಳ ಅಕಾಡೆಮಿಕ್ ಅವಧಿಯಲ್ಲಿ ಪ್ರಥಮ ರಾಂಕ್ ನಲ್ಲಿ ಉತ್ತೀರ್ಣ ರಾಗಿದ್ದಾರೆ.
ಇವರನ್ನು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಿ.ವೀರೇಂದ್ರ ಹೆಗ್ಗಡೆಯವವರಿಂದ ಬಂಗಾರದ ಪದಕ ಸ್ವೀಕರಿಸಿದ್ದಾರೆ.
ಪ್ರಸ್ತುತ ನೀಕ್ಷಾ ಕಳೆದ 8 ತಿಂಗಳುಗಳಿಂದ ರಾಜ್ಯದ ಹೆಸರಾಂತ ಜೀ ಕನ್ನಡ ವಾಹಿನಿಯಲ್ಲಿ ‘ಸೋಶಿಯಲ್ ಮೀಡಿಯಾ ಎಕ್ಸಿಕ್ಯೂಟಿವ್’ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.




