ಕಳಸ ಲೈವ್ ವರದಿ
ಕಳಸದಲ್ಲಿ ಪ್ರಥಮ ಬಾರಿಗೆ ಗೆಳತಿಯರ ಬಳಗದಿಂದ ಒಂದು ದಿನದ ಕಾಫಿನಾಡು ಹಬ್ಬ ಇದೇ ತಿಂಗಳ 12ನೇ ತಾರೀಕಿನಂದು ಕಳಸದ ರೋಟರಿ ಭವನದಲ್ಲಿ ಬೆಳಿಗ್ಗೆ 9ರಿಂದ ರಾತ್ರಿ 8ರ ವರೆಗೆ ನಡೆಯಲಿದೆ.
ಈ ಕಾಫಿನಾಡು ಹಬ್ಬದಲ್ಲಿ ರಾಜ್ಯದ ನಾನಾ ಕಡೆಯಿಂದ ವಿವಿಧ ಬಗೆಯ ಸ್ಟಾಲ್ ಗಳು ಬರಲಿದ್ದು, ಇದರಲ್ಲಿ ಸೀರೆಗಳು ಕುರ್ತೀಸ್, ಬೆಡ್ಶೀಟುಗಳು, ವಿವಿಧ ಬಗೆಯ ಹೂ ಕುಂಡಗಳು, ಹೂವಿನ ಗಿಡಗಳು, ಹಣ್ಣಿನ ಗಿಡಗಳು, ಆಭರಣಗಳು, ಹಿತ್ತಾಳೆ ಪಾತ್ರೆಗಳು, ತರಕಾರಿ ಬೀಜಗಳು, ಹೋಂಮೇಡ್ ಚಾಕಲೇಟ್ಗಳು, ಬ್ರ್ಯಾಂಡೆಡ್ ಶೂ ಮತ್ತು ಚಪ್ಪಲಿಗಳು, ವಿವಿಧ ಬಗೆಯ ಗೃಹೋಪಯೋಗಿ ವಸ್ತುಗಳು, ಚನ್ನಪಟ್ಟಣ ಗೊಂಬೆಗಳು, ಮ್ಯಾಜಿಕ್ ಪುಸ್ತಕ, ಮ್ಯಾಜಿಕ್ ಟವಲ್ ಮತ್ತು ಕೈಯಿಂದ ತಯಾರಿಸಿದ ಚೀಲಗಳು, ಕೃಷಿ ಉತ್ಪನ್ನಗಳು, ಮಲೆನಾಡಿನ ಸವಿರುಚಿಯ ಬಗೆ ಬಗೆಯ ಖಾಧ್ಯಗಳು ಕಡುಬು, ರೊಟ್ಟಿ, ಶ್ಯಾವಿಗೆ, ನಾಟಿಕೋಳಿ ಸಾರು, ಬಿರಿಯಾನಿ ಇನ್ನೂ ಹತ್ತು ಹಲವು ಬಗೆಯ ವಿಶೇಷ ತಿಂಡಿ ತಿನಸುಗಳು ಒಂದೇ ಸೂರಿನಡಿ ಲಭ್ಯವಿರಲಿದೆ.
ವಿಶೇಷ ಎಂದರೆ ಇಲ್ಲಿ ಹಳೆಯ ರೇಷ್ಮೆಸೀರೆಗಳನ್ನು ಕೊಂಡು ನಗದನ್ನು ನೀಡಲಾಗುತ್ತದೆ. ಹಾಗೂ ಅಭಯ ಗೋಲ್ಡ್ ಬೆಂಗಳೂರು ಇವರಿಂದ ಹಳೆ ಅಭರಣ ತೆಗೆದುಕೊಂಡು ಹೊಸ ಆಭರಣ ಕೂಡ ಕೊಡಲಾಗುತ್ತದೆ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ 9481590538, 8073653960 ಈ ನಂ ಸಂಪರ್ಕಿಸಬಹುದು.


