ಕಳಸ ಲೈವ್ ವರದಿ
ಕಳಸ-ಮಂಗಳೂರು ಗೆ ತೆರಳುತ್ತಿದ್ದ ಖಾಸಾಗಿ ಬಸ್ಸು ಕಳಸ ಸಮೀಪದ ಶ್ರೀ ರಾಮ ಬಳಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಇಳಿದಿದೆ.
ಕಳಸದಿಂದ 8.45ಕ್ಕೆ ಹೊರಡುತ್ತಿದ್ದ ಈ ಬಸ್ಸು ಕೆಲ ವರ್ಷಗಳಿಂದ ಸ್ಥಗಿತಗೊಂಡಿತ್ತು. ಆದರೆ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಮತ್ತೆ ಆರಂಭಗೊAಡಿತ್ತು. ಈ ಸಮಯಕ್ಕೆ ಹೊರಡುವ ಬಸ್ಸು ಸಂಸೆ ಐಟಿಐ ಹೋಗುವ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೂ ಸಾಕಷ್ಟು ಅನುಕೂಲವಾಗುತ್ತಿತ್ತು.
ಇಂದು ನಡೆದ ಘಟನೆಯ ಸಂದರ್ಭದಲ್ಲೂ ಹೆಚ್ಚಾಗಿ ವಿದ್ಯಾರ್ಥಿಗಳೇ ಬಸ್ಸಿನಲ್ಲಿ ಸಂಚಾರ ಮಾಡುತ್ತಿದ್ದರು. ಅದೃಷ್ಟವಶಾತ್ ಯಾರಿಗೂ ಹಾನಿಯಾಗಲಿಲ್ಲ.


