ಕಳಸ ಲೈವ್ ವರದಿ
ಅಡಿಕೆ, ಕಾಳುಮೆಣಸು ಮತ್ತು ಕಾಫಿ ಬೆಳೆಗಳಲ್ಲಿನ ರೋಗ ನಿಯಂತ್ರಣ ಮತ್ತು ಸಮಗ್ರ ಪೋಷಕಾಂಶಗಳ ನಿರ್ವಹಣೆ ಕುರಿತು ರೈತರಿಗೆ ಉಪಯುಕ್ತವಾಗುವ “ವಿಚಾರ ಸಂಕಿರಣ” ವನ್ನು ಕಳಸದಲ್ಲಿ ಆಯೋಜಿಸಲಾಗಿದೆ.
ಬಾಯರ್ ಕ್ರಾಪ್ ಸೈನ್ಸ್ ಲಿಮಿಟೆಡ್ ಮತ್ತು ಶ್ರೀ ಚನ್ನಕೇಶವ ಅಗ್ರೋ ಸರ್ವಿಸಸ್, ಕಳಸ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ 6-12-2025ರಂದು ಸಂಜೆ 5-30ಕ್ಕೆ ಪಟ್ಟಣದ ರೋಟರಿ ಭವನದಲ್ಲಿ ಈ ಕಾರ್ಯಕ್ರಮವು ನಡೆಯಲಿದೆ.
ಈ ವಿಚಾರ ಸಂಕಿರಣದಲ್ಲಿ ಅಡಿಕೆ, ಕಾಳುಮೆಣಸು, ಮತ್ತು ಕಾಫಿ ಬೆಳೆಗಳಲ್ಲಿ ರೋಗ ನಿಯಂತ್ರಣ ಮತ್ತು ಸಮಗ್ರ ಪೋಷಕಾಂಶಗಳ ನಿರ್ವಹಣೆ ಕುರಿತು ತಜ್ಞರು ಮಾಹಿತಿ ನೀಡಲಿದ್ದಾರೆ.
ಈ ಭಾಗದ ಅಡಿಕೆ, ಕಾಳುಮೆಣಸು ಮತ್ತು ಕಾಫಿ ಬೆಳೆಗಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ತಮ್ಮ ಬೆಳೆಗಳಿಗೆ ಸಂಬAಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವAತೆ ಮತ್ತು ತಜ್ಞರಿಂದ ಹೆಚ್ಚಿನ ಮಾಹಿತಿ ಪಡೆಯುವಂತೆ ಆಯೋಜಕರು ಕೋರಿದ್ದಾರೆ.

