
ಕಳಸ ಭದ್ರಾ ನದಿಯ ಹೆಬ್ಬಾಳೆಯಲ್ಲಿ ಯುವಕನೋರ್ವ ಕಾಲು ಜಾರಿ ಬಿದ್ದು ಮೃತ ಪಟ್ಟಿರುವ ಘಟನೆ ಶನಿವಾರ ನಡೆದಿದೆ.
ಚಿತ್ರದುರ್ಗದ ಅಶೋಕ್ (19) ಮೃತ ಪಟ್ಟ ಯುವಕ
ಅಶೋಕ್ ತನ್ನ ಕುಟುಂಬದವರ ಜೊತೆ ಹೊರನಾಡು ಅನ್ನಪೂರ್ಣೇಶ್ವರಿ ದೇವರ ದರ್ಶನಕ್ಕೆ ಬಂದಿದ್ದರು.ದೇವಸ್ಥಾನಕ್ಕೆ ಹೋಗುವ ಮೊದಲು ದಾರಿ ಮಧ್ಯೆ ಸಿಗುವ ಭದ್ರಾ ನದಿಯ ಹೆಬ್ಬಾಳೆಯಲ್ಲಿ ಸ್ನಾನಕ್ಕೆಂದು ಇಳಿದಿದ್ದಾರೆ.ಈ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ನೀರಿನ ಸೆಳೆತಕ್ಕೆ ಸಿಕ್ಕಿ ಮೃತ ಪಟ್ಟಿದ್ದಾನೆ.