ಹೊರನಾಡು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದಲ್ಲಿ ಶ್ರೀ ವರ್ಧಂತ್ಯುತ್ಸವ ಮೇ 3 ರಂದು ನಡೆಯಲಿದೆ ಎಂದು ಹೊರನಾಡು ದೇವಸ್ಥಾನದ ಧರ್ಮಕರ್ತ ಡಾ|ಜಿ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ.
ಶ್ರೀ ಪ್ರಮಾದಿ ನಾಮ ಸಂವತ್ಸರದ ವೈಶಾಖ ಮಾಸ ಶುಕ್ಲ ಪಕ್ಷ ತದಿಗೆ 1973ನೇ ಮೇ 5ನೇ ಶನಿವಾರದಂದು ನೂತನವಾಗಿ ನಿರ್ಮಿಸಿದ ಶಿಲಾಮಯ ದೇವಾಲಯದಲ್ಲಿ ಶ್ರೀ ಆದಿಶಕ್ತಿ ದೇವಿಯ ಪ್ರತಿಷ್ಠೆ ಹಾಗೂ ಶ್ರೀ ಅನ್ನಪೂರ್ಣೇಶ್ವರೀ ಅಮ್ಮನವರ ಪುನರ್ ಪ್ರತಿಷ್ಠಾಪನೆಯನ್ನು ನೆರವೇರಿಲಾಯಿತು.ಆ ಪುಣ್ಯ ದಿನದ ಶ್ರೀ ವರ್ಧಂತ್ಯುತ್ಸವ ಮೇ 3ರಂದು ನಡೆಯಲಿದೆ.
ಅಂದು ಶ್ರೀ ಮಹಾಗಣಪತಿ ಹೋಮ,ಶ್ರೀ ಚಂಡಿಕಾ ಹೋಮ,ಶ್ರೀ ಲಲಿತಾ ಹೋಮ,ಶ್ರೀ ಲಕ್ಷ್ಮೀನಾರಾಯಣ ಹೃದಯ ಹೋಮ,ಶ್ರೀ ರಾಮತಾರಕ ಹೋಮ,ಶ್ರೀ ಅನ್ನಪೂರ್ಣ ಮೂಲ ಮಂತ್ರ ಹೋಮ,ಶ್ರೀ ಬಾಲತ್ರಿಪುರ ಸುಂದರಿ ಹೋಮ,ಶ್ರೀ ಗಾಯತ್ರಿ ಹೋಮ,ಶ್ರೀ ನವಗ್ರಹ ಹೋಮ,ಶ್ರೀ ರುದ್ರಹೋಮ,ಶ್ರೀ ವೇದ ಪಾರಾಯಣ ನಡೆಯಲಿದೆ ಎಂದು ತಿಳಿಸಿದ್ದಾರೆ.