
ಕಳಸ ಲೈವ್ ವರದಿ
ಇಲ್ಲಿನ ಸಂತ ಲಾರೆನ್ಸರ ದೇವಾಲಯ, ಸಂಸೆ ಧರ್ಮಕೇಂದ್ರಕ್ಕೆ ನೂತನ ಉಸ್ತುವಾರಿ ಗುರುಗಳಾಗಿ ಆಗಮಿಸಿದ ವಂದನೀಯ ಸ್ವಾಮಿ ಚೌರಪ್ಪ ರವರನ್ನು ಸಂಸೆ ಧರ್ಮಕೇಂದ್ರ ಮತ್ತು ಸರ್ವ ಭಕ್ತಾದಿಗಳ ಪರವಾಗಿ ಅತ್ಯಂತ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ಕ್ರಿಸ್ತನ ಸಂದೇಶ ಸಾರಲು ಮತ್ತು ಜನಸೇವೆ ಮಾಡಲು ದೈವಿಕವಾಗಿ ನೇಮಿಸಲ್ಪಟ್ಟಿರುವ ವಂ. ಸ್ವಾಮಿ ಚೌರಪ್ಪ ರವರು ಧರ್ಮಕೇಂದ್ರದ ಉಸ್ತುವಾರಿ ಗುರುಗಳಾಗಿ ತಮ್ಮ ಪವಿತ್ರ ಸೇವೆಯನ್ನು ಅಧಿಕೃತವಾಗಿ ಆರಂಭಿಸಿದರು.
ಕಾರ್ಯಕ್ರಮದಲ್ಲಿ ಸಂತ ಲಾರೆನ್ಸರ ದೇವಾಲಯ ಹಾಗೂ ಸಂಸೆ ಧರ್ಮಕೇಂದ್ರದ ಸರ್ವ ಭಕ್ತಾದಿಗಳು ಉಪಸ್ಥಿತರಿದ್ದು, ಹೊಸ ಗುರುಗಳಿಗೆ ಭಕ್ತಿಪೂರ್ವಕ ಹಾಗೂ ಆತ್ಮೀಯ ಸ್ವಾಗತವನ್ನು ಕೋರಿದರು.
