
ಕಳಸ ಲೈವ್ ವರದಿ
ಡಾ. ರಾಜ್ ಕನ್ನಡ ಸಂಘ ಕಳಸ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ಉದ್ಯಮಿ ಮೊಹಮ್ಮದ್ ಹ್ಯಾರಿಸ್ ಅವರ 55ನೇ ವರ್ಷದ ಹುಟ್ಟುಹಬ್ಬವನ್ನು ಅವರ ಖಾಸಗಿ ಎಸ್ಟೇಟ್ನಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಉದ್ಯಮಿ ಮೊಹಮ್ಮದ್ ಹ್ಯಾರಿಸ್, ನಾನು ಕಳಸಕ್ಕೆ ಬಂದು ಮೂರು ವರ್ಷಗಳಾಗಿವೆ. ಇಲ್ಲಿನ ಜನ ಮತ್ತು ಪ್ರಕೃತಿ ನನಗೆ ಅಪಾರ ಸಂತೋಷವನ್ನು ನೀಡಿದೆ. ಕಳಸವು ಹಿಂದೂ, ಕ್ರೈಸ್ತ, ಮುಸ್ಲಿಂ ಎಂಬ ಭೇದವಿಲ್ಲದೆ ಎಲ್ಲರೂ ಅತ್ಯಂತ ಸಹೋದರತೆ ಹಾಗೂ ಸೌಹಾರ್ದತೆಯಿಂದ ಬದುಕುವಂತಹ ಒಂದು ಪುಣ್ಯ ನೆಲವಾಗಿದೆ. ಇಲ್ಲಿನ ಮಸೀದಿ, ದೇವಸ್ಥಾನ ಹಾಗೂ ಚರ್ಚ್ಗಳಿಗೂ ನಾನು ಭೇಟಿ ನೀಡಿದ್ದೇನೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕರವೇ ಗೌರವಾಧ್ಯಕ್ಷ ಮಲ್ನಾಡ್ ಶರೀಫ್, ಮೊಹಮ್ಮದ್ ಹ್ಯಾರಿಸ್ ಅವರು ಜಾತಿ, ಮತ ಭೇದವಿಲ್ಲದೆ ಸಮಾಜದ ಎಲ್ಲ ವರ್ಗದ ಜನರಿಗೂ ಸಹಾಯ ಹಸ್ತ ಚಾಚುವ ಕೊಡುಗೈ ದಾನಿಯಾಗಿದ್ದಾರೆ. ಇಲ್ಲಿನ ಮಸೀದಿ, ದೇವಸ್ಥಾನ ಹಾಗೂ ಶಾಲೆಗಳ ಅಭಿವೃದ್ಧಿಗೆ ಅವರು ನೀಡಿರುವ ನೆರವು ಮತ್ತು ಕೊಡುಗೆಗಳು ಶ್ಲಾಘನೀಯ ಎಂದು ಹೇಳಿದರು.
ಹುಟ್ಟುಹಬ್ಬದ ಆಚರಣೆಯೊಂದಿಗೆ ಎಸ್ಟೇಟ್ನಲ್ಲಿ ದುಡಿಯುವ ಹೊರರಾಜ್ಯದ ಕೂಲಿ ಕಾರ್ಮಿಕರ ಮಕ್ಕಳಿಗೆ ಎಸ್ಟೇಟ್ನಲ್ಲಿಯೇ ಶಿಕ್ಷಣ ನೀಡಲು ಖಾಸಗಿ ಶಿಕ್ಷಕಿಯೊಬ್ಬರನ್ನು ನೇಮಿಸಲಾಗಿದ್ದು, ಮಕ್ಕಳಿಗೆ ಸ್ಲೇಟ್ ಮತ್ತು ಪುಸ್ತಕಗಳನ್ನು ವಿತರಿಸಿ, ಮಕ್ಕಳಿಗೆ ಸ್ಥಳದಲ್ಲಿಯೇ ಅಕ್ಷರಭ್ಯಾಸ ಮಾಡುವ ಮೂಲಕ ಈ ಉದಾತ್ತ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಡಾ. ರಾಜ್ ಕನ್ನಡ ಸಂಘದ ಅಧ್ಯಕ್ಷರಾದ ಕನ್ನಡ ರಾಜು, ಕರವೇ ಅಧ್ಯಕ್ಷ ಅಶೋಕ್, ಸಂತೋಷ್, ಸ್ಥಳೀಯ ಮುಖಂಡರಾದ ಅಬ್ದುಲ್ ಶುಕುರು, ಮಹಮ್ಮದ್ ರಫೀಕ್ ಸೇರಿದಂತೆ ಹಲವು ಪ್ರಮುಖರು ಹಾಗೂ ಸ್ಥಳೀಯರು ಉಪಸ್ಥಿತರಿದ್ದು, ಹುಟ್ಟುಹಬ್ಬದ ಸಂಭ್ರಮವನ್ನು ಹಂಚಿಕೊAಡರು.
