ಕಳಸ ಲೈವ್ ವರದಿ
ಕಳಸ: ಇಲ್ಲಿನ ಕೆ.ಪಿ.ಎಸ್. ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಿಕಾ ಶಾಲೆಯಲ್ಲಿ ಪಿ.ಎಂ.ಶ್ರೀ ಯೋಜನೆ ಅಡಿಯಲ್ಲಿ 2026-27ನೇ ಸಾಲಿಗೆ ತಾತ್ಕಾಲಿಕವಾಗಿ ವಿವಿಧ ಶಿಕ್ಷಕರು ಹಾಗೂ ಸಿಬ್ಬಂದಿ ಹುದ್ದೆಗಳ ನೇಮಕಾತಿಗಾಗಿ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ ಹಾಗೂ ವಿದ್ಯಾರ್ಹತೆ:
ಕಂಪ್ಯೂಟರ್ ಶಿಕ್ಷಕರು (1 ಹುದ್ದೆ): ಬಿಸಿಎ, ಬಿ.ಎಸ್ಸಿ ಕಂಪ್ಯೂಟರ್ ಸೈನ್ಸ್, ಬಿ.ಟೆಕ್/ಬಿ.ಇ ಅಥವಾ ಕಂಪ್ಯೂಟರ್ ಸೈನ್ಸ್ನಲ್ಲಿ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರಬೇಕು. ಮಾಸಿಕ ವೇತನ ₹25,000/- ಇರಲಿದೆ.
ಸಂಗೀತ ಮತ್ತು ನೃತ್ಯ ಶಿಕ್ಷಕರು (1 ಹುದ್ದೆ): ಎಸ್ಎಸ್ಎಲ್ಸಿ ಜೊತೆಗೆ ಸರ್ಕಾರದಿಂದ ನಡೆಸುವ ಸಂಗೀತ ಅಥವಾ ಭರತನಾಟ್ಯದಲ್ಲಿ ಪ್ರೌಢಿಮೆ/ವಿದ್ವತ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು. ಮಾಸಿಕ ವೇತನ ₹12,000/- ಇರಲಿದೆ.
ಯೋಗ ಮತ್ತು ಕರಾಟೆ ಶಿಕ್ಷಕರು (1 ಹುದ್ದೆ): ಎಸ್ಎಸ್ಎಲ್ಸಿ ಜೊತೆಗೆ ಸರ್ಕಾರದಿಂದ ನಡೆಸುವ ಸಂಬAಧಿಸಿದ ಕ್ಷೇತ್ರದಲ್ಲಿ ಸರ್ಟಿಫಿಕೇಟ್ ಕೋರ್ಸ್ ಪೂರ್ಣಗೊಳಿಸಿರಬೇಕು. ಮಾಸಿಕ ವೇತನ ₹12,000/- ಇರಲಿದೆ.
ಭದ್ರತಾ ಸಿಬ್ಬಂದಿ (1 ಹುದ್ದೆ): ಕನಿಷ್ಠ ಎಸ್ಎಸ್ಎಲ್ಸಿ ಉತ್ತೀರ್ಣರಾಗಿದ್ದು, ಆರೋಗ್ಯವಂತ ಸದೃಢ ದೇಹದಾರ್ಢ್ಯ ಹೊಂದಿರಬೇಕು. ಮಾಸಿಕ ವೇತನ ₹10,000/- ಇರಲಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಅರ್ಹ ಅಭ್ಯರ್ಥಿಗಳು ತಮ್ಮ ಸಂಪೂರ್ಣ ವಿವರ ಹಾಗೂ ಸೂಕ್ತ ದಾಖಲಾತಿಗಳೊಂದಿಗೆ ದಿನಾಂಕ: 24-06-2026 ರ ಒಳಗಾಗಿ ಕಳಸದ ಕೆ.ಪಿ.ಎಸ್. ಬಾಲಿಕಾ ಶಾಲೆಗೆ ಅರ್ಜಿಯನ್ನು ಸಲ್ಲಿಸಲು ಕೋರಲಾಗಿದೆ.
ಹೆಚ್ಚಿನ ಮಾಹಿತಿ ಹಾಗೂ ವಿವರಗಳಿಗಾಗಿ ಶಾಲಾ ಮುಖ್ಯ ಶಿಕ್ಷಕರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ: 9481444596 / 8088735696 ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಶಾಲೆಯ ಮುಖ್ಯ ಶಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
