ಕಳಸ ಲೈವ್ ವರದಿ
ಕಳಸದ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ, ಚಿಕ್ಕಮಗಳೂರಿನ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಹಾಗೂ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿಯ ಎನ್ಆರ್ಎಲ್ಎಂ ಯೋಜನೆಯ ಜಂಟಿ ಆಶ್ರಯದಲ್ಲಿ ಸ್ವಸಹಾಯ ಸಂಘಗಳ ಮಹಿಳೆಯರಿಗಾಗಿ ಆಯೋಜಿಸಲಾಗಿರುವ ೧೨ ದಿನಗಳ ಅಗರಬತ್ತಿ ತಯಾರಿಕಾ ತರಬೇತಿ ಶಿಬಿರದ ಮೊದಲ ದಿನದ ಕಾರ್ಯಕ್ರಮಕ್ಕೆ ಇಂದು ಅಧಿಕೃತವಾಗಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಸುಮನಾ ಜಯರಾಜ್, ತರಬೇತಿಯಲ್ಲಿ ಪಾಲ್ಗೊಂಡಿರುವ ಎಲ್ಲಾ ಶಿಬಿರಾರ್ಥಿಗಳು ಈ ೧೨ ದಿನಗಳ ಶಿಬಿರದ ಸಂಪೂರ್ಣ ಸದುಪಯೋಗವನ್ನು ಪಡೆದುಕೊಳ್ಳಬೇಕು. ಕೇವಲ ತರಬೇತಿಗೆ ಸೀಮಿತವಾಗದೆ, ನಂತರದ ದಿನಗಳಲ್ಲಿ ಇದನ್ನು ಸ್ವಯಂ ಉದ್ಯೋಗವನ್ನಾಗಿ ಮುಂದುವರಿಸಬೇಕು. ಆ ಮೂಲಕ ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಬೇಕು. ಉತ್ಪಾದಿಸಿದ ಅಗರಬತ್ತಿಗಳಿಗೆ ಮಾರುಕಟ್ಟೆ ಕಂಡುಕೊಳ್ಳುವ ಕುರಿತು ಮಾಹಿತಿ ನೀಡಿದ ಅವರು, ಮಹಿಳೆಯರು ತಯಾರಿಸುವ ಉತ್ಪನ್ನಗಳ ಮಾರಾಟಕ್ಕೆ ‘ಸಂಜೀವಿನಿ ಮಾಸಿಕ ಸಂತೆ’ಯAತಹ ಉತ್ತಮ ವೇದಿಕೆಗಳಿದ್ದು, ಇವುಗಳನ್ನು ಬಳಸಿಕೊಂಡು ಆರ್ಥಿಕವಾಗಿ ಮುನ್ನಡೆಯಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್ಟಿಎಲ್ಎಫ್ ನ ಪ್ರೇಮ, ಆರ್ಸೆಟಿ ನಿರ್ದೇಶಕರಾದ ಶ್ರೀಪ್ರಸಾದ್, ಉಪನ್ಯಾಸಕರಾದ ರವಿಚಂದ್ರ ಮತ್ತು ದೀಪಿಕಾ, ಸಂತೋಷ್, ಕೌಶಲ್ಯ ವಿಭಾಗದ ವಲಯ ಮೇಲ್ವಿಚಾರಕರಾದ ಚೈತ್ರ, ಬಿಆರ್ಪಿ-ಪಿಆರ್ಐ ಸಮೀರಾ, ಬಿಆರ್ಪಿ-ಇಪಿ ಸುರಕ್ಷಾ, ಜಿಪಿಎಲ್ಎಪ್ ಸಿಬ್ಬಂದಿಗಳು ಹಾಗೂ ಸ್ವಸಹಾಯ ಸಂಘಗಳ ಹಲವಾರು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
