ಕಳಸ ಲೈವ್ ವರದಿ
ಗಜಮುಖ ಇವೆಂಟ್ಸ್ ವತಿಯಿಂದ ಕಳಸದಲ್ಲಿ ಇದೇ ಜೂನ್ 26, 27 ಮತ್ತು 28 ರಂದು ಮೂರು ದಿನಗಳ ಕಾಲ ‘ಹಲಸು ಮೇಳ’ ವನ್ನು ಆಯೋಜಿಸಲಾಗಿದೆ.
ಈ ಮೇಳದಲ್ಲಿ ಹಲಸಿನ ಹಣ್ಣಿನ ಪ್ರಿಯರಿಗಾಗಿ ವಿವಿಧ ಬಗೆಯ ಖಾದ್ಯಗಳ ಮಳಿಗೆಗಳನ್ನು ತೆರೆಯಲಾಗುತ್ತಿದೆ. ಹಲಸಿನ ಹಣ್ಣಿನ ಜಿಲೇಬಿ, ಹೋಳಿಗೆ ಹಾಗೂ ಇನ್ನಿತರೆ ಬಾಯಲ್ಲಿ ನೀರೂರಿಸುವ ಸಿಹಿ ತಿಂಡಿಗಳ ಸ್ಟಾಲ್ಗಳು ಈ ಮೇಳದ ಪ್ರಮುಖ ವಿಶೇಷ ಆಕರ್ಷಣೆಯಾಗಿರಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.
ಹಲಸಿನ ಉತ್ಪನ್ನಗಳ ಜೊತೆಗೆ, ಈ ಮೇಳದಲ್ಲಿ ಸಾರ್ವಜನಿಕರಿಗಾಗಿ ಮತ್ತೊಂದು ವಿಶೇಷ ಅವಕಾಶವನ್ನು ಕಲ್ಪಿಸಲಾಗಿದೆ. ಸಾರ್ವಜನಿಕರು ತಮ್ಮಲ್ಲಿರುವ ಹಳೆಯ ಜರಿ ಸೀರೆಗಳನ್ನು ಇಲ್ಲಿ ನೀಡಿ, ತಕ್ಷಣವೇ ನಗದು ಹಣವನ್ನು ಪಡೆದುಕೊಳ್ಳಬಹುದಾಗಿದೆ.
ದಿನಾಂಕ: ಜೂನ್ 26, 27 ಮತ್ತು 28
ಸಮಯ: ಬೆಳಗ್ಗೆ 10:00 ಗಂಟೆಯಿ0ದ ರಾತ್ರಿ 10:00 ಗಂಟೆಯವರೆಗೆ
ಸ್ಥಳ: ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿ ಸಭಾಂಗಣ, ಕಳಸ
ಸಾರ್ವಜನಿಕರಿಗೆ ಉಚಿತ ಪ್ರವೇಶವಿರುತ್ತದೆ.
ಹೆಚ್ಚಿನ ಮಾಹಿತಿ ಅಥವಾ ವಿವರಗಳಿಗಾಗಿ ಸಾರ್ವಜನಿಕರು ಮೊಬೈಲ್ ಸಂಖ್ಯೆ 8970088963 ಅನ್ನು ಸಂಪರ್ಕಿಸಬಹುದಾಗಿದೆ.
