
ಕಳಸ ಲೈವ್ ವರದಿ
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಳಸ ಮತ್ತು ಇದರ ಅಂಗಸAಸ್ಥೆಯ ಜೊತೆಗೂಡಿ ಹಾಗೂ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಬಾಳೆಹೊಳೆ ಇವರ ಸಹಯೋಗದೊಂದಿಗೆ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಬಾಳೆಹೊಳೆಯ ಸರಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯೋಗ ಗುರು ವೈ ಪ್ರೇಮ್ ಕುಮಾರ್ ಮಕ್ಕಳಿಗೆ ಯೋಗ ಹೇಳಿಕೊಟ್ಟು ನಂತರ ಮಾತನಾಡಿದ ಅವರು ಸಾಮಾನ್ಯವಾಗಿ ಯೋಗ ಎಂದರೆ ಕೇವಲ ಶರೀರವನ್ನು ಬಗ್ಗಿಸುವುದು ಅಥವಾ ಕಷ್ಟದ ಆಸನಗಳನ್ನು ಮಾಡುವುದು ಎಂದು ಹಲವರು ಭಾವಿಸುತ್ತಾರೆ. ಆದರೆ ಯೋಗ ಜೋಡಿಸುವುದು ಅಥವಾ ಒಂದಾಗಿಸುವುದು. ನಮ್ಮ ದೇಹ, ಮನಸ್ಸು ಮತ್ತು ಆತ್ಮವನ್ನು ಒಂದೇ ಸೂತ್ರದಲ್ಲಿ ಬೆಸೆಯುವುದೇ ನಿಜವಾದ ಯೋಗ.ಇವತ್ತಿನ ಯಾಂತ್ರಿಕ ಜೀವನದಲ್ಲಿ ಒತ್ತಡ, ಆತಂಕ ಮತ್ತು ಅನಾರೋಗ್ಯಗಳು ನಮ್ಮನ್ನು ಕಾಡುತ್ತಿವೆ. ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯ ಕೊರತೆ ದೊಡ್ಡ ಸಮಸ್ಯೆಯಾಗಿದೆ. ಇಂತಹ ಸಂದರ್ಭದಲ್ಲಿ ಯೋಗ ನಮಗೆ ಸಂಜೀವಿನಿಯಿದ್ದAತೆ ಎಂದು ಹೇಳಿದರು.
ಕಸಾಪ ತಾಲ್ಲೂಕು ಅಧ್ಯಕ್ಷ ಅ.ರಾ.ಸತೀಶ್ಚಂದ್ರ ಮಾತನಾಡಿ ವಿದ್ಯಾರ್ಥಿಗಳು ದಿನಕ್ಕೆ ಕನಿಷ್ಠ ೧೫ ರಿಂದ ೨೦ ನಿಮಿಷ ಯೋಗ ಅಭ್ಯಾಸ ಮಾಡಿದರೆ, ಅವರ ನೆನಪಿನ ಶಕ್ತಿ ಮತ್ತು ಏಕಾಗ್ರತೆ ಅದ್ಭುತವಾಗಿ ಸುಧಾರಿಸುತ್ತದೆ. ಯೋಗ ಎಂಬುದು ಕೇವಲ ಜೂನ್ ೨೧ರ ಒಂದು ದಿನದ ಆಚರಣೆಯಾಗಬಾರದು. ಅದು ನಮ್ಮ ಜೀವನದ ಒಂದು ಭಾಗವಾಗಬೇಕು. ಹೇಗೆ ನಾವು ಪ್ರತಿದಿನ ಊಟ ಮಾಡುತ್ತೇವೆಯೋ, ಹಾಗೆಯೇ ಪ್ರತಿದಿನ ಯೋಗ ಮಾಡುವುದನ್ನು ರೂಢಿಸಿಕೊಳ್ಳಬೇಕು. ಆರೋಗ್ಯವಂತ ವ್ಯಕ್ತಿಯಿಂದ ಮಾತ್ರ ಆರೋಗ್ಯವಂತ ಸಮಾಜ ಮತ್ತು ಸದೃಢ ದೇಶ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಜಾಪ ಅಧ್ಯಕ್ಷ ಅಜಿತ್ ಪ್ರಸಾದ್, ಕಸಾಪ ಕಾರ್ಯದರ್ಶಿ ಕಿರಣ್ ಶೆಟ್ಟಿ, ಮುಖ್ಯ ಶಿಕ್ಷ ಪ್ರಸನ್ನ, ಶಿಕ್ಷಕರಾದ ಶಿವಕುಮಾರ್, ಕುಮಾರ್, ರವಿ ಇತರರು ಇದ್ದರು.
