ಕಳಸ ಲೈವ್ ವರದಿ
ಕಳಸ ತಾಲೂಕು ಛಾಯಗ್ರಾಹಕರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಮಂಗಳವಾರ ನಡೆದ ಸಂಘದ ಸಭೆಯಲ್ಲಿ ಯಶಸ್ವಿಯಾಗಿ ಜರುಗಿತು.
ಸಂಘದ ಮುಂದಿನ ಅವಧಿಯ ಸಾರಥ್ಯವನ್ನು ವಹಿಸಿಕೊಳ್ಳಲು ಸರ್ವಾನುಮತದಿಂದ ಹೊಸ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ.
ಮಂಗಳವಾರ ನಡೆದ ಸಭೆಯ ತೀರ್ಮಾನದಂತೆ ಸಂಘದ ಪ್ರಮುಖ ಜವಾಬ್ದಾರಿಗಳಿಗೆ ಈ ಕೆಳಗಿನವರನ್ನು ಆಯ್ಕೆ ಮಾಡಲಾಗಿದೆ:
ಗೌರವಾಧ್ಯಕ್ಷರು: ವಾಸುದೇವ (ಆಧ್ಯಾ ಸ್ಟುಡಿಯೋ) ಜಯಂತ್ ತೆಂಡೂಲ್ಕರ್ (ತೆಂಡೂಲ್ಕರ್ ಸ್ಟಿಲ್ಸ್), ಅಧ್ಯಕ್ಷರು: ರವಿ ಕುಮಾರ್ (ಆಶೀರ್ವಾದ್ ಸ್ಟುಡಿಯೋ), ಕಾರ್ಯದರ್ಶಿ: ಶಿವು ಸಂಸೆ, ಸಹಕಾರ್ಯದರ್ಶಿ: ಸುಜಾತ (ಕೆ.ಜೆ. ಡಿಜಿಟಲ್), ಖಜಾಂಚಿ: ಅಶೋಕ್ (ಅಜಂತಾ), ಉಪಾಧ್ಯಕ್ಷರು: ಪ್ರಶಾಂತ್ (ಜಯಲಕ್ಷ್ಮಿ ಸ್ಟುಡಿಯೋ) ಮತ್ತು ಗಣೇಶ್ (ಅಕ್ಷರ ಸ್ಟುಡಿಯೋ) ಜಿಲ್ಲಾ ನಿರ್ದೇಶಕರಾಗಿ ವೆಂಕಟರಮಣ ಹೆಬ್ಬಾರ್ ಮತ್ತು ನರೇಂದ್ರ ಕೆ.ಎಸ್ ಇವರನ್ನು ಆಯ್ಕೆ ಮಾಡಲಾಯಿತು
