ಕಳಸ ಲೈವ್ ವರದಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ಶೃಂಗೇರಿ ತಾಲೂಕು ವತಿಯಿಂದ ಯೋಜನೆಯ ಸಿ.ಎಸ್.ಸಿ ಕೇಂದ್ರಗಳಲ್ಲಿ ಕೇಂದ್ರ ಸರ್ಕಾರದ ಒಲಂಪಿಯಡ್ ಪರೀಕ್ಷೆಯನ್ನು ಆನ್ಲೈನ್ ಮೂಲಕ ಆಯೋಜಿಸಲಾಗಿತ್ತು. ತಾಲೂಕಿನಾದ್ಯಂತ 3ನೇ ತರಗತಿಯಿಂದ 12ನೇ ತರಗತಿಯ ಒಟ್ಟು 580 ವಿದ್ಯಾರ್ಥಿಗಳಿಗೆ ಈ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುವ ಅವಕಾಶವನ್ನು ಕಲ್ಪಿಸಿಕೊಡಲಾಗಿತ್ತು.
ಈ ಒಲಂಪಿಯಡ್ ಪರೀಕ್ಷೆಯು ಮುಖ್ಯವಾಗಿ ಗಣಿತ, ವಿಜ್ಞಾನ, ಇಂಗ್ಲಿಷ್ ಮತ್ತು ಸಾಮಾನ್ಯ ಜ್ಞಾನ ವಿಷಯಗಳಲ್ಲಿ ವಿದ್ಯಾರ್ಥಿಗಳ ಜ್ಞಾನ, ಕೌಶಲ್ಯ ಹಾಗೂ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ.
ಈ ಪರೀಕ್ಷೆಯಲ್ಲಿ ಕಳಸ ಭಾಗದ ವಿದ್ಯಾರ್ಥಿಗಳು ಶೇಕಡಾ 90 ರಷ್ಟು ಅತ್ಯುತ್ತಮ ಫಲಿತಾಂಶದೊ0ದಿಗೆ ಉತ್ತೀರ್ಣರಾಗಿದ್ದು, ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳಿಗೆ ಒಲಂಪಿಯಡ್ ಪ್ರಮಾಣಪತ್ರ ವಿತರಣೆ ಮಾಡಲಾಯಿತು.
ಪ್ರಮಾಣಪತ್ರ ವಿತರಣಾ ಕಾರ್ಯಕ್ರಮದಲ್ಲಿ ಕಳಸ ವಲಯದ ಮೇಲ್ವಿಚಾರಕರಾದ ಮಂಜುನಾಥ್, ಸೇವಾ ಪ್ರತಿನಿಧಿಗಳಾದ ಉಷಾ, ಶೋಭಾ, ಸೌಮ್ಯ ಹಾಗೂ ಸಿ.ಎಸ್.ಸಿ ಸೇವಾದಾರರಾದ ರಕ್ಷಿತಾ ಮತ್ತು ಶಿಲ್ಪಾ ಅವರು ಉಪಸ್ಥಿತರಿದ್ದರು.
