ಕಳಸ ಲೈವ್ ವರದಿ
ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನ, ಶ್ರೀಕ್ಷೇತ್ರ ಹೊರನಾಡು ವತಿಯಿಂದ ಗ್ರಾಮೀಣಾಭಿವೃದ್ಧಿ ಹಾಗೂ ಶೈಕ್ಷಣಿಕ ಅಭಿವೃದ್ಧಿ ಯೋಜನೆಗಳಡಿ ಉಚಿತ ಸಾಮಗ್ರಿ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ದಿನಾಂಕ 02-08-2026ನೇ ಭಾನುವಾರ ಬೆಳಿಗ್ಗೆ 11:00 ಗಂಟೆಗೆ ಹೊರನಾಡಿನ ಶ್ರೀ ಲಲಿತಕಲಾ ಮಂಟಪದಲ್ಲಿ ಈ ಸಭಾ ಕಾರ್ಯಕ್ರಮವು ನಡೆಯಲಿದೆ.
ಅನ್ನದಾಸೋಹ ಯೋಜನೆಯಡಿ ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಮತ್ತು ಆಯ್ದ ದೇವಸ್ಥಾನಗಳಿಗೆ 25,000 ತಟ್ಟೆ-ಲೋಟಗಳ ವಿತರಣೆ. ಶೈಕ್ಷಣಿಕ ಅಭಿವೃದ್ಧಿ ಯೋಜನೆಯಡಿ ಕಳಸ ತಾಲ್ಲೂಕಿನ ಶಾಲಾ ಮಕ್ಕಳಿಗೆ 15,000 ನೋಟ್ಬುಕ್ಗಳ ವಿತರಣೆ. ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪ್ರಥಮ ದರ್ಜೆ ಕಾಲೇಜುಗಳ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ. ಹೊರನಾಡು ಸರ್ಕಾರಿ ಹಿರಿಯ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ವಾರ್ಷಿಕ ಶಾಲಾ ಶುಲ್ಕ ವಿತರಣೆ ನಡೆಯಲಿದೆ.
ಈ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಕ್ಷೇತ್ರ ಹೊರನಾಡಿನ ಧರ್ಮಕರ್ತರಾದ ಶ್ರೀ ಜಿ. ಭೀಮೇಶ್ವರ ಜೋಷಿ ವಹಿಸಲಿದ್ದಾರೆ. ಪ್ರಮುಖ ಅತಿಥಿಗಳಾಗಿ ಶ್ರೀ ಕೋಟಾ ಶ್ರೀನಿವಾಸ ಪೂಜಾರಿ (ಮಾನ್ಯ ಸಂಸದರು, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ) ಶ್ರೀಮತಿ ನಯನಾ ಮೋಟಮ್ಮ (ಮಾನ್ಯ ಶಾಸಕರು, ಮೂಡಿಗೆರೆ ವಿಧಾನಸಭಾ ಕ್ಷೇತ್ರ) ಶ್ರೀ ವಿಶ್ವೇಶ್ವರ ಭಟ್ (ಪ್ರಧಾನ ಸಂಪಾದಕರು, ವಿಶ್ವವಾಣಿ ದಿನಪತ್ರಿಕೆ) ಶ್ರೀ ಹೆಚ್.ಡಿ. ಜ್ವಾಲನಯ್ಯ (ಉಪಾಧ್ಯಕ್ಷರು, ರಾಜ್ಯ ಜಾತ್ಯಾತೀತ ಜನತಾದಳ) ಶ್ರೀ ಕೆ.ಎ. ಶ್ರೇಣಿಕ್ ಜೈನ್ (ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್, ಕಳಸ) ಅಲ್ಲದೆ, ಶ್ರೀ ಎಂ.ಬಿ. ಸಂತೋಷ್, ಹಿನಾರಿ (ಅಧ್ಯಕ್ಷರು, ಜಾತ್ಯಾತೀತ ಜನತಾದಳ, ಕಳಸ) ಹಾಗೂ ಶ್ರೀ ಶ್ರೀಕಾಂತ್ (ಅಧ್ಯಕ್ಷರು, ಬಿ.ಜೆ.ಪಿ. ಕಳಸ) ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
