ಕನ್ನಡ ಸಾಹಿತ್ಯ ಸಮ್ಮೇಳನಗಳು ಕನ್ನಡದ ಮನಸ್ಸುಗಳನ್ನು ಕಟ್ಟುವಂತಾಗಿರಬೇಕು ಹೋರತು,ದುಂದು ವೆಚ್ಚದ ಸಮ್ಮೇಳನವಾಗಬಾರದು ಎಂದು ಸಾಹಿತಿ ಅ.ರಾ.ರಾಧಕೃಷ್ಣ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಕಳಸ ಘಟಕದ ವತಿಯಿಂದ ಗುರುವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 1915ರಲ್ಲಿ ಸ್ಥಾಪನೆಯಾದ ಕನ್ನಡಿಗರ ಸಾಂಸ್ಕøತಿಕ ಮೇರು ಸಂಸ್ಥೆಯೇ ಕನ್ನಡ ಸಾಹಿತ್ಯ ಪರಿಷತ್ತು.1914ರಲ್ಲಿ ಅಂದಿನ ಮೈಸೂರು ಸಂಸ್ಥಾನದ ಸಂಪದಭ್ಯುದಯ ಸಮಾಜ ತನ್ನ ವಾರ್ಷಿಕ ಅಧಿವೇಷನದಲ್ಲಿ ಕೈಗೊಂಡ ಮಹತ್ವದ ನಿರ್ಧಾರ ಕನ್ನಡ ಸಾಹಿತ್ಯ ಪರಿಷತ್ತಿನ ಉಗಮಕ್ಕೆ ಕಾರಣವಾಯ್ತು ಎಂದರು.
ಕಳಸ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಅ.ರಾ.ಸತೀಶ್ಚಂದ್ರ ಮಾತನಾಡಿ ಕನ್ನಡ ಬಾಷೆ ಸಂಪತ್ಬರಿತ ಬಾಷೆಯಾದರೂ ಎಲ್ಲೋ ಒಂದು ರೀತಿಯಲ್ಲಿ ಅಳುಕಿದೆ.ಬಾಷೆ ತನ್ನ ಗಟ್ಟಿತನವನ್ನು ಕಳೆದುಕೋಳ್ಳುತ್ತಿದೆ.ನಾವು ಕನ್ನಡಿಗರು ಮೃದು ಸ್ವಭಾವದವರು.ಎಲ್ಲಾ ಭಾಷೆಯನ್ನು ಪ್ರೀತಿಸುವವರು ಆಂಗ್ಲ ವ್ಯಾಮೋಹದವರು.ಪರಭಾಷೆಯ ದಾಳಿಯಿಂದ ನಮ್ಮ ಇತರ ಭಾಷಾ ವ್ಯಾಮೋಹವೇ ನಮಗೆ ದುಸ್ಥಿತಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷ ಅಬ್ದುಲ್ ಕರೀಂ ಅವರನ್ನು ಗೌರವಿಸಲಾಯಿತು.
ಪುಷ್ಪಗಿರಿ ಪ್ರತಿಷ್ಠಾನದ ಸಂಸ್ಥಾಪಕ ಮೋಹನ್ ರಾಜಣ್ಣ,ಮಹಿಳಾ ಘಟಕದ ಅಧ್ಯಕ್ಷೆ ಮಮ್ತಾಜ್ ಬೇಗಂ,ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಯ ಸದಾನಂದ ಇದ್ದರು.
