ಕೊಟ್ಟಿಗೆಹಾರ
ಬಣಕಲ್ ಠಾಣಾ ವ್ಯಾಪ್ತಿಯ ಹೆಬ್ಬರಿಗೆ ಬಳಿ ನದಿ ದಂಡೆಯಲ್ಲಿ ಅಪರಿಚಿತ ಗಂಡಸಿನ ಶವc ಕೊಳೆತ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದೆ.
ಸ್ಥಳಕ್ಕೆ ಬಣಕಲ್ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು ಶವವನ್ನು ಚಿಕ್ಕಮಗಳೂರಿನ ಶವಾಗಾರಕ್ಕೆ ಸಾಗಿಸಲಾಗಿದೆ. ಬಣಕಲ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಬಣಕಲ್ ಠಾಣೆ ಪಿಎಸ್ಐ ಗಾಯತ್ರಿ, ಎಎಸ್ಐ ಶಶಿ, ಸಾಮಾಜಿಕ ಕಾರ್ಯಕರ್ತರ ಆರೀಪ್ ಬಣಕಲ್ ಮುಂತಾದವರು ಇದ್ದರು.
