ಕಳಸ ಲೈವ್ ವರದಿ
ಕಳಸ ಸಾರ್ವಜನಿಕ ಶ್ರೀ ಸೌಹಾರ್ದ ಗಣೇಶೋತ್ಸವ ಸಮಿತಿಯ ವತಿಯಿಂದ ನಡೆಯಲಿರುವ ಮೂರನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಕಳಸದ ಅರಮನೆಮಕ್ಕಿ ಗಣಪತಿ ಪೆಂಡಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಸೆಪ್ಟೆಂಬರ್ 14ರಿಂದ 22ರವರೆಗೆ ಒಂಬತ್ತು ದಿನಗಳ ಕಾಲ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ಪ್ರತಿದಿನ ವಿಶೇಷ ಪೂಜೆ ಹಾಗೂ ರಾತ್ರಿ 7 ಗಂಟೆಯಿAದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಮಿತಿ ತಿಳಿಸಿದೆ.
ಸೆಪ್ಟೆಂಬರ್ 14ರಂದು ಸೌಹಾರ್ದ ಮಹಾಗಣಪತಿಯ ಪ್ರಾಣ ಪ್ರತಿಷ್ಠೆ ನಡೆಯಲಿದ್ದು, ರಾತ್ರಿ ಧ್ರುವತಾರೆ ಮ್ಯೂಸಿಕ್ ನೈಟ್ ಕಾರ್ಯಕ್ರಮ ನಡೆಯಲಿದೆ. ಸೆ.15ರಂದು ಕಲಾ ಸಿಂಚನ ಕಳಸ, ನೃತ್ಯ ನಾಟ್ಯ ಕಲಾಕ್ಷೇತ್ರ ಬೆಂಗಳೂರು ಹಾಗೂ ಆಯ್ದ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ವೈಭವ ನಡೆಯಲಿದೆ. ಸೆ.16ರಂದು ಸೃಷ್ಟಿ ಕಲಾವಿದರು ಉಡುಪಿ ಇವರಿಂದ ರಸಮಂಜರಿ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ.
ಸೆ.17ರಂದು ಬೆಳಿಗ್ಗೆ ಸತ್ಯನಾರಾಯಣ ಪೂಜೆ ನಡೆಯಲಿದ್ದು, ರಾತ್ರಿ ಲಕುಮಿ ಕಲಾವಿದರು ಕುಡ್ಲ ಇವರಿಂದ ‘ಶನಿಮಹಾತ್ಮೆ’ ನಾಟಕ ಪ್ರದರ್ಶನಗೊಳ್ಳಲಿದೆ. ಸೆ.18ರಂದು ಕಾಪು ರಂಗತರAಗ ಕಲಾವಿದರಿಂದ ‘ಕುಟ್ಯಣ್ಣನ ಕುಟುಂಬ’ ನಾಟಕ ನಡೆಯಲಿದೆ.
ಸೆ.19ರಂದು ಬೆಳಿಗ್ಗೆ ಚತುರ್ದ್ರವ್ಯ ಮಹಾಗಣಪತಿ ಹೋಮ ನಡೆಯಲಿದ್ದು, ರಾತ್ರಿ ‘ನನಗ್ಯಾಕೋ ಡೌಟ್’ ನಾಟಕ ಹಾಗೂ ರಾತ್ರಿ 8.30ರಿಂದ ಯಕ್ಷ ತೆಲಿಕೆ ಕಾರ್ಯಕ್ರಮ ನಡೆಯಲಿದೆ. ಸೆ.20ರಂದು ಬೆಳಗ್ಗೆಯಿಂದ ಪುರುಷರು ಮತ್ತು ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ರಾತ್ರಿ ಚಾಪರ್ಕ ಕಲಾವಿದರಿಂದ ‘ಯಾನೊರಿ ಬರೋಲಿಯಾ’ ನಾಟಕ ಪ್ರದರ್ಶನಗೊಳ್ಳಲಿದೆ.
ಸೆ.21ರಂದು ಸಂಜೆ ರಂಗಪೂಜೆ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಚಿರಾಗ್ ಈವೆಂಟ್ಸ್ ಬೆಂಗಳೂರು ಇವರಿಂದ ಮ್ಯೂಸಿಕಲ್ ನೈಟ್ ಹಾಗೂ ನೃತ್ಯ ಪ್ರದರ್ಶನ ನಡೆಯಲಿದೆ.
ಸೆ.22ರಂದು ಬೆಳಿಗ್ಗೆ ಎನ್. ತಾಜ್ ಅರ್ಪಿಸುವ ರಿದಂ ಮ್ಯೂಸಿಕಲ್ ಆರ್ಕೆಸ್ಟ್ರಾ ನಡೆಯಲಿದ್ದು, ಬಳಿಕ ಲಕ್ಕಿ ಡಿಪ್ ಡ್ರಾ ಆಯೋಜಿಸಲಾಗಿದೆ. ನಂತರ ಶ್ರೀ ಸ್ವಾಮಿಯ ವೈಭವಯುತ ಶೋಭಾಯಾತ್ರೆ ನಡೆಯಲಿದ್ದು, ಜಲಸ್ಥಂಭನದೊAದಿಗೆ ಗಣೇಶೋತ್ಸವಕ್ಕೆ ತೆರೆ ಬೀಳಲಿದೆ ಎಂದು ಸಮಿತಿಯ ಅಧ್ಯಕ್ಷ ಬಿ.ವಿ. ರವಿ ರೈ ತಿಳಿಸಿದ್ದಾರೆ.
ಆಮಂತ್ರಣ ಪತ್ರಿಕೆ ಬಿಡುಗಡೆ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಬ್ರಹ್ಮದೇವ, ಗೌರವಾಧ್ಯಕ್ಷ ಸುಜಯ ಸದಾನಂದ, ಖಜಾಂಚಿ ಪದ್ಮಕುಮಾರ್ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು
