
ಕಳಸ ಲೈವ್ ವರದಿ
ಕಳಸ ತಾಲ್ಲೂಕಿನ ಸಂಸೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ)ಯ ವಿದ್ಯಾರ್ಥಿ ಆಶ್ವಿತ್ ಎ. ಅವರು ಜುಲೈ 2026ರ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು, 600ಕ್ಕೆ 516 ಅಂಕ ಗಳಿಸಿ ಶೇ.86ರಷ್ಟು ಫಲಿತಾಂಶದೊAದಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಆಶ್ವಿತ್ ಅವರು ಎಲೆಕ್ಟಾçನಿಕ್ಸ್ ಮೆಕಾನಿಕ್ ವಿಭಾಗದಲ್ಲಿ ಟ್ರೇಡ್ ಪ್ರಾಕ್ಟಿಕಲ್ನಲ್ಲಿ 250ಕ್ಕೆ 208 ಅಂಕ, ಟ್ರೇಡ್ ಥಿಯರಿಯಲ್ಲಿ 100ಕ್ಕೆ 88 ಅಂಕ, ಎಂಪ್ಲಾಯಬಿಲಿಟಿ ಸ್ಕಿಲ್ಸ್ನಲ್ಲಿ 50ಕ್ಕೆ 44 ಅಂಕ ಹಾಗೂ ಫಾರ್ಮೇಟಿವ್ ಅಸೆಸ್ಮೆಂಟ್ನಲ್ಲಿ 200ಕ್ಕೆ 176 ಅಂಕ ಗಳಿಸಿದ್ದಾರೆ.
ಒಟ್ಟಾರೆ 516/600 ಅಂಕಗಳೊ0ದಿಗೆ ಶೇ.86ರಷ್ಟು ಫಲಿತಾಂಶ ದಾಖಲಿಸಿರುವ ಆಶ್ವಿತ್ ಆಯ್ದುಕೊಂಡ ವಿಭಾಗದಲ್ಲಿ ಅತೀ ಹೆಚ್ಚು ಅಂಕವನ್ನು ಪಡೆದವರಾಗಿದ್ದಾರೆ.ಅವರು ಈಗಾಗಲೇ ಪ್ರತಿಷ್ಠಿತ ಕಂಪೆನಿಯೊ0ದರಲ್ಲಿ ಉದ್ಯೋಗವನ್ನು ಗಿಟ್ಟಿಸಿಕೊಂಡಿದ್ದಾರೆ.
ಅಶ್ವಿತ್ ಅವರು ಕಳಸ ಚಿತ್ತಾರ ಸ್ಟುಡಿಯೋ ಮಾಲಿಕ ಅಶೋಕ್ ಆಶಾ ದಂಪತಿಗಳ ಪುತ್ರರಾಗಿದ್ದಾರೆ. ಅವರ ಸಾಧನೆಗೆ ಕುಟುಂಬಸ್ಥರು, ಸ್ನೇಹಿತರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಅಶ್ವಿತ್ ಅವರ ಮುಂದಿನ ವೃತ್ತಿಜೀವನದಲ್ಲಿಯೂ ಇನ್ನಷ್ಟು ಯಶಸ್ಸು ಗಳಿಸಲಿ ಎಂದು ಕಳಸ ಲೈವ್ನ ಎಲ್ಲಾ ವೀಕ್ಷಕರ, ಓದುಗರ ಮತ್ತು ಅಭಿಮಾನಿಗಳ ಪರವಾಗಿ ಶುಭ ಹಾರೈಸುತ್ತಿದೆ.
