ಎಸ್ಸೆಸ್ಸೆಲ್ಸಿ ಕನ್ನಡ ವಿಷಯದಲ್ಲಿ ಪೂಣಾಂಕ ಪಡೆದ ಕಳಸ ತಾಲ್ಲೂಕಿನ 21 ವಿದ್ಯಾರ್ಥಿಗಳನ್ನು ಕಳಸ ಕೆಪಿಎಸ್ ಪ್ರೌಡಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಳಸ ಇವರ ವತಿಯಿಂದ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಸಾಪ ಕಳಸ ತಾಲ್ಲೂಕು ಅಧ್ಯಕ್ಷ ಅ,ರಾ.ಸತೀಶ್ಚಂದ್ರ,ಪ್ರೌಢ ಶಾಲೆ ಪ್ರಾಚಾರ್ಯ ಜಿ.ಶಿವಕುಮಾರಸ್ವಾಮಿ,ಆಂಗ್ಲ ಶಿಕ್ಷಕ ಎಚ್.ಎನ್.ಶಿವಕುಮಾರ್,ಸಾಹಿತಿ ಅ.ರಾ.ರಾಧಕೃಷ್ಣ,ಪುಷ್ಪಗಿರಿ ಸಾಂಸ್ಕøತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಡಾ.ಮೋಹನ್ ರಾಜಣ್ಣ,ಕೃಷಿ ಅಧಿಕಾರಿ ಪಾಂಡುರಂಗ,ಕಸಾಪ ಕಾರ್ಯದರ್ಶಿ ಶಿವರಾಮ ಪಂಡಿತ್,ಕೋಶಾಧಿಕಾರಿ ಕಿರಣ್ ಶೆಟ್ಟಿ ಇದ್ದರು.
