ಮೂವತ್ತು ಪುಟಾಣಿಗಳಿಗೆ ಕೆಪಿಎಸ್ ಲಾಟರಿ
ತಾಲ್ಲೂಕಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಲ್ಕೆಜಿ ವಿಭಾಗಕ್ಕೆ ಮಕ್ಕಳನ್ನು ಲಾಟರಿ ಮುಖಾಂತರ ಸೋಮವಾರ ಆಯ್ಕೆ ಮಾಡಲಾಯಿತು.
ನಿಗದಿತ 30 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು,ಒಟ್ಟು 58 ವಿದ್ಯಾರ್ಥಿಗಳು ಎಲ್ಕೆಜಿ ಪ್ರವೇಶಕ್ಕಾಗಿ ಅರ್ಜಿಗಳನ್ನು ಸಲ್ಲಿಸಿದ್ದರು.
ಸೋಮವಾರ ಪೋಷಕರು,ಅಧಿಕಾರಿಗಳು ಮತ್ತು ಜನಪ್ರತಿನಿದಿಗಳ ಸಮ್ಮುಖದಲ್ಲಿ ಲಾಟರಿ ಎತ್ತುವುದರ ಮುಖಾಂತರ 30 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಾಜು,ಕೆಪಿಎಸ್ ಪ್ರಾಂಶುಪಾಲ ಅನಂತ ಪದ್ಮನಾಭ,ಕೆಪಿಎಸ್ ಪ್ರೌಢಶಾಲೆ ಪ್ರಾಂಶುಪಾಲ ಜಿ.ಶಿವಕುಮಾರ್,ಕೆಪಿಎಸ್ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ನಗ್ಮಾಭಾನು,ಬಾಲಕರ ಶಾಲೆ ಮುಖ್ಯ ಶಿಕ್ಷಕಿ ಶಸಿಕಲಾ,ಪಂಚಾಯಿತಿ ಅಧಿಕಾರಿ ಸಂತೋಷ್,ಪಂಚಾಯಿತಿ ಸದಸ್ಯರಾದ ರಂಗನಾಥ್,ಕಾರ್ತಿಕ್ ಶಾಸ್ತ್ರಿ,ವಿರೇಂದ್ರ,ಸಿಆರ್ಪಿ ಸಾವಿತ್ರಿ,ಶಿಕ್ಷಕಿ ಲಲಿತಾ ಇದ್ದರು.
