ಕಳಸದಲ್ಲಿ ಶನಿವಾರದಿಂದ ಸುರಿಯುತ್ತಿರುವ ಮಳೆಯ ಹಿನ್ನಲೆಯಲ್ಲಿ ಕಲಶೇಶ್ವರ ದೇವಸ್ಥಾನದ ತಡೆಗೋಡೆ ಕುಸಿದಿದೆ.
ಭಾನುವಾರ ರಾತ್ರಿ ಸುರಿದ ಮಳೆಯ ಪರಿಣಾಮ ಈ ಘಟನೆ ನಡೆದಿದೆ.ಕಳಸ ಮುಖ್ಯ ರಸ್ತೆಯ ಅಂಚಿನಲ್ಲಿರುವ ದೇವಸ್ಥಾನ ರಸ್ತೆಯಿಂದ ಸುಮಾರು ನೂರು ಅಡಿಗಳಷ್ಟು ಎತ್ತರದಲ್ಲಿದೆ.ದೇವಸ್ಥಾನದ ಸುತ್ತಲೂ ಹಲವಾರು ವರ್ಷಗಳ ಹಿಂದೆ ತಡೆಗೋಡೆ ಕಟ್ಟಲಾಗಿದೆ.ಈ ತಡೆಗೋಡೆಯ ಒಂದು ಭಾಗ ಕುಸಿದು ಬಿದ್ದಿದೆ.ಅಲ್ಲದೆ 2019ರಲ್ಲೂ ಸುರಿದ ಮಹಾ ಮಳೆಗೂ ದೇವಸ್ಥಾನದ ಒಂದು ಭಾಗದ ತಡೆಗೋಡೆ ಕುಸಿದಿದ್ದು, ಈ ಭಾರಿ ಮತ್ತೆ ಕುಸಿತವಾಗಿರುವುದರಿಂದ ಮತ್ತಷ್ಟು ಆತಂಕ ಎದುರಾಗಿದೆ.

