ಕಳಸ ತಾಲ್ಲೂಕಿನಾಧ್ಯಂತ ನಾಗರ ಪಂಚಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.

ನಾಗದೇವರ ದೇವಸ್ಥಾನವೆಂದೆ ಪ್ರಸಿದ್ದಿ ಪಡೆದ ಭದ್ರಾ ನದಿಯ ದಡದಲ್ಲಿ ನೆಲೆನಿಂತ ಪುರಾಣ ಪ್ರಸಿದ್ಧ ಹಳುವಳ್ಳಿ ಶ್ರೀಮಹಾಗಣೇಶ್ವರ ಸಮೇತ ಸುಬ್ರಹ್ಮಣೈಶ್ವರ ದೇವಾಸ್ಥಾನದಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು.

ದೇವಸ್ಥಾನದ ನಾಗ ಬನಕ್ಕೆ ಬೇಟಿ ನೀಡಿ ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ನಾಗ ಶಿಲೆಗಳಿಗೆ ಹಾಲು,ಎಳೆನೀರು ಅರ್ಪಿಸಿ ತಮ್ಮ ಇಷ್ಠಾರ್ಥಕ್ಕಾಗಪ್ರಾರ್ಥಿಸಿಕೊಂಡರು.

ಭಕ್ತಾದಿಗಳು ದೇವಸ್ಥಾನಕ್ಕೆ ಬೇಟಿ ನೀಡಿ ತಾವು ಕಷ್ಟಕಾಲಕ್ಕೆ ಹೇಳಿಕೊಂಡ ಹರಕೆಯಂತೆ ಬೆಳ್ಳಿ ಹಾವಿನ ಹೆಡೆ,ಮೊಟ್ಟೆ,ನರ,ತೊಟ್ಟಿಲು ಇತ್ಯಾಧಿಗಳನ್ನು ಹರಕೆ ರೂಪದಲ್ಲಿ ದೇವರಿಗೆ ಸಲ್ಲಿಸಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿಕೊಂಡರು
.
