ಶ್ರೀ ವಿದ್ಯಾ ಗಣಪತಿ ಯುವಕ ಸಂಘ ನಡೆಸುತ್ತಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಇಂದು(ಗುರುವಾರ) ಬಸ್ರಿಕಲ್ ನಲ್ಲಿ ಆಟೋಟ ಸ್ಪರ್ಧೆ ಏರ್ಪಡಿಸಲಾಗಿದೆ.

ವಾಲಿಬಾಲ್ ಹಾಗೂ ಇತರ ಆಟೋಟ ಸ್ಪರ್ಧೆಗಳು ನಡೆಯಲಿದ್ದು, ಮಧ್ಯಾಹ್ನ ಅನ್ನಸಂತರ್ಪಣೆಯು ನಡೆಯಲಿದೆ. ಈ ಕಾರ್ಯಕ್ರಮದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶ್ರೀ ವಿದ್ಯಾ ಗಣಪತಿ ಯುವಕಸಂಘ (ರಿ) ಅಧ್ಯಕ್ಷರು ಕಾರ್ಯದರ್ಶಿ ಸರ್ವ ಸದಸ್ಯರು ಕೋರಿದ್ದಾರೆ.
