ಕಳಸ ಲೈವ್ ವರದಿ
ಭಾರತೀಯ ಜನತಾ ಪಾರ್ಟಿಯ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುವ ಉದ್ದೇಶದೊಂದಿಗೆ, ಕಳಸ ಮತ್ತು ಬಾಳೂರು ಮಹಾಶಕ್ತಿ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ‘ಪ್ರಶಿಕ್ಷಣ ವರ್ಗ’ ಕಾರ್ಯಕ್ರಮವು ಹಳುವಳ್ಳಿಯ ಸರ್ವ ಸಿದ್ದಿ ಕುಮಾರ ಸಭಾಭವನದಲ್ಲಿ ಯಶಸ್ವಿಯಾಗಿ ಜರುಗಿತು.
ಗುರುವಾರ ಆರಂಭವಾದ ಈ ಶಿಬಿರವನ್ನು ಮೂಡಿಗೆರೆ ಮಂಡಲ ಅಧ್ಯಕ್ಷರಾದ ಗಜೇಂದ್ರ ಕೊಟ್ಟಿಗೆಹಾರ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾರ್ಯಕರ್ತರು ಪಕ್ಷದ ಸಿದ್ಧಾಂತಗಳನ್ನು ಮನೆಮನಕ್ಕೆ ತಲುಪಿಸುವ ಕಾರ್ಯ ಮಾಡಬೇಕು ಎಂದರು. ಮಂಡಲ ಉಪಾಧ್ಯಕ್ಷರಾದ ನಾಗಭೂಷಣ್ ಬಾಳೆಹೊಳೆ ಅವರು ಪ್ರಾಸ್ತಾವಿಕ ಭಾಷಣ ಮಾಡಿ ಪ್ರಶಿಕ್ಷಣ ವರ್ಗದ ಉದ್ದೇಶಗಳನ್ನು ವಿವರಿಸಿದರು.
ವೇದಿಕೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನರೇಂದ್ರ ಮತ್ತು ಪುಣ್ಯಪಾಲ್, ಕಳಸ ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀಕಾಂತ್, ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ, ಬಾಳೂರು ಶಕ್ತಿ ಕೇಂದ್ರದ ಅಧ್ಯಕ್ಷ ಮಂಜುನಾಥ್ ಉಪಸ್ಥಿತರಿದ್ದರು. ಅಲ್ಲದೆ ಗಿರೀಶ್ ಹೆಮ್ಮಕ್ಕಿ, ಶೇಷಗಿರಿ, ವೆಂಕಟ ಸುಬ್ಬಯ್ಯ, ಸುಜಯ ಸದಾನಂದ್, ಮಂಡಲ ಪ್ರಧಾನ ಕಾರ್ಯದರ್ಶಿ ಲೋಕೇಶ್ ಮರ್ಕಲ್, ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ. ಮಹೇಶ್ ಹಾಗೂ ಸುಂದರ್ ಶೆಟ್ರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪಕ್ಷದ ಬಲವರ್ಧನೆಗಾಗಿ ನಡೆದ ಈ ಅಭ್ಯಾಸ ವರ್ಗದಲ್ಲಿ ಒಟ್ಟು ೭ ಅವಧಿಗಳ ತರಬೇತಿ ನೀಡಲಾಯಿತು. ಜಿಲ್ಲೆಯಿಂದ ಆಗಮಿಸಿದ್ದ ಏಳು ಜನ ಸಂಪನ್ಮೂಲ ವ್ಯಕ್ತಿಗಳು ವಿವಿಧ ವಿಷಯಗಳ ಕುರಿತು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು. ಕಳಸ ಹಾಗೂ ಬಾಳೂರು ಭಾಗದ ಬೂತ್ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಅಧ್ಯಕ್ಷರು-ಕಾರ್ಯದರ್ಶಿಗಳು, ಗ್ರಾಮ ಪಂಚಾಯಿತಿಯ ಹಾಲಿ ಮತ್ತು ಮಾಜಿ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಶುಕ್ರವಾರದAದು ಮಧ್ಯಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಷತ್ ಉಪಸಭಾಪತಿಗಳಾದ ಎಂ.ಕೆ. ಪ್ರಾಣೇಶ್ ಅವರು ಪಾಲ್ಗೊಂಡು ಸಮಾರೋಪ ನುಡಿಗಳನ್ನು ಆಡಿದರು. “ಪಕ್ಷದ ಶಕ್ತಿ ಅದರ ಶಿಸ್ತಿನ ಕಾರ್ಯಕರ್ತರಲ್ಲಿದೆ,” ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಕಾಂತ್ ವಹಿಸಿದ್ದರು. ಸಮಾರೋಪದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಣ್ಯಪಾಲ್, ಬಾಳೂರು ಅಧ್ಯಕ್ಷ ಮಂಜುನಾಥ್, ಮುಖಂಡರಾದ ದೀಪಕ್ ದೊಡ್ಡಯ್ಯ, ಶೇಷಗಿರಿ, ಸುಜಯ ಸದಾನಂದ, ಬಿ.ಕೆ. ಮಹೇಶ್ ಮತ್ತು ಸುಂದರ್ ಶೆಟ್ಟಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
