ಕಳಸ ಲೈವ್ ವರದಿ
ತಾಲ್ಲೂಕಿನ ಸುಕ್ಷೇತ್ರ ಕಳಸದ ಹೊಸದೇವರ ಚಾವಡಿಯಲ್ಲಿ 2026ರ ಏಪ್ರಿಲ್ ತಿಂಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಗ್ರಾಮ ದೇವತೆಗಳ ನೇಮೋತ್ಸವ ಹಾಗೂ ಶ್ರೀ ಮಾರಿಕಾಂಬಾ ಮಹಾಪೂಜೆಯು ಅದ್ದೂರಿಯಾಗಿ ಜರುಗಲಿದೆ.
ಈ ವೈಭವದ ಆರಾಧನಾ ಮಹೋತ್ಸವವು ದಿನಾಂಕ 09-04-2026ನೇ ಗುರುವಾರದಿಂದ 28-04-2026ನೇ ಮಂಗಳವಾರದವರೆಗೆ ಹದಿನೆಂಟು ದಿನಗಳ ಕಾಲ ವಿವಿಧ ಹಂತಗಳಲ್ಲಿ ನಡೆಯಲಿದೆ.
ಏಪ್ರಿಲ್ 9ರಂದು ಬಂಡಾರ ಮನೆಯಿಂದ ಗ್ರಾಮದೇವರ ಬಂಡಾರ ಶ್ರೀ ಕಲಶೇಶ್ವರಸ್ವಾಮಿ ಸನ್ನಿಧಿಗೆ ಹೊರಡುವುದು.ಅನಂತರ ಶ್ರೀ ಹೊಸದೇವರಚಾವಡಿಗೆ ತೆರಳುವುದು.ರಾತ್ರಿ ಗ್ರಾಮದೇವರ ಬಂಡಾರ ಹೊಸದೇವರ ಚಾವಡಿಯಿಂದ ಹೊರಟು ಶ್ರೀ ಗುತ್ಯಮ್ಮನವರು ಹಾಗೂ ಶ್ರೀ ಬೆಳ್ಳಾರಮ್ಮನವರು ಅರಮನೆಮಕ್ಕಿ ಮೈದಾನದ ಮಾರಿ ಚಪ್ಪರಕ್ಕೆ ಆಗಮಿಸಿ ಶ್ರೀ ಮಾರಿಕಾಂಬ ಬಿಂಬ ಸ್ಥಾಪನೆ.
ಏಪ್ರಿಲ್ 10ರಂದು ಅರಮನೆ ಮಕ್ಕಿ ಮೈದಾನದಲ್ಲಿ ಶ್ರೀ ಮಾರಿಕಾಂಬಾ ಮಹಾಪೂಜೆ ಬೆಳಿಗ್ಗೆ ಹೂವಿನ ಪೂಜೆ ಮತ್ತು ಮಧ್ಯಾಹ್ನ ರಾಶಿ ಪೂಜೆ ಗ್ರಾಮದೇವರ ದರ್ಶನ
ಏಪ್ರಿಲ್ 12 ರಂದು ಹೊಸದೇವರ ಚಾವಡಿಯಲ್ಲಿ ಕಲಾ ಸಾನಿಧ್ಯ ಕಲಶಾಭಿಷೇಕ, ಪಂಜುರ್ಲಿ ದೈವದ ಪ್ರತಿಷ್ಠೆ, ರಾತ್ರಿ ಶ್ರೀ ವಿಷ್ಣುಮೂರ್ತಿ, ಶ್ರೀ ರಕ್ತೇಶ್ವರೀ, ಶ್ರೀ ಅರಮನೆ ಜಟಿಗ, ಶ್ರೀ ರಾಜದೈವದ ನೇಮ, ಉಯ್ಯಾಲೆ ಸೇವೆ ನಡೆಯಲಿದೆ.
ಏಪ್ರಿಲ್ 13ರಂದು ಶ್ರೀ ದೂಮಾವತಿ ದೈವ, ಸೂರ್ಲುಮನೆ ಚೌಡಿ,ಮನ ಪಂಜುರ್ಲಿ ಹಾಗೂ ಜಟಿಗ ದೈವದ ನೇಮ, ದೂಮಾವತಿ ದೈವದ ಉಯ್ಯಾಲೆ ಸೇವೆ.
ಏಪ್ರಿಲ್ 14ರಂದು ರಾತ್ರಿ ಅಡಕೋಡು ಚೌಡಿ,ನಂದಿಕೋಣ, ಬೇಟೆಗಾರ, ವೀರ ಹನುಮಂತ ಮತ್ತು ಪಂಜುರ್ಲಿ ದೈವದ ನೇಮ
ಏಪ್ರಿಲ್ 21ರಂದು ಗುತ್ತಿಯಮ್ಮ ದೇವಸ್ಥಾನದಲ್ಲಿ ಮಾತಂಗಿ ಎಲ್ಲಮ್ಮನವರಿಗೆ ಅಲಂಕಾರ ಪೂಜೆ, ದರ್ಶನ ಬಲಿ, ಎಡೆಪೂಜೆ
ಏಪ್ರಿಲ್ 28ರಂದು ನಡೆಯುವ ಬೆಳ್ಳಾರಮ್ಮನವರಿಗೆ ತೀರ್ಥಸ್ನಾನ, ಕೆಂಡದರ್ಶನ, ಉಯ್ಯಾಲೆ ಸೇವೆಯೊಂದಿಗೆ ಉತ್ಸವವು ಸಂಪನ್ನಗೊಳ್ಳಲಿದೆ ಎಂದು ದೈವಸ್ಥಾನದ ವಹಿವಾಟುದಾರರಾದ ಚಂಪಾ ಎಮ್ ರಾವ್ ತಿಳಿಸಿದ್ದಾರೆ.
