ಕಳಸ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿಯಿಂದ ಶಿಕ್ಷಕರ ದಿನಾಚರಣೆಯನ್ನು ಶನಿವಾರ ನಡೆಸಲಾಯಿತು.
ಮಹಿಳಾ ಮಂಡಳಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಗಳಿಗೆ ಹೊಸ ರೂಪ ಕೊಟ್ಟಂತಹ ಕಳಸದ ಶಿಕ್ಷಕರಾದ ಮಧುಸೂಧನ್, ಕಿರಣ್, ಮಂಜುನಾಥ್, ಸಲೀಮ್ ಜಾವೇದ್, ಶ್ರೀಕಾಂತ್, ಸಂದೀಪ್ ಇವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಯ ಸದಾನಂದ ಮಾತನಾಡಿ, ಕಳಸ ಮಹಿಳಾ ಮಂಡಳಿಯು ಈ ಹಿಂದಿನಿಂದಲೂ ಬಾಲಕೀಯರ ಶಾಲೆಗೆ ರಂಗಮಂದಿರ, ವಾಚನಾಲಯ, ಪ್ರತಿಭಾನ್ವಿತ ಮಕ್ಕಳಿಗೆ ಪ್ರೋತ್ಸಾಹ ಧನ ನೀಡುವುದರ ಮುಖಾಂತರ ಶೈಕ್ಷಣಿಕವಾಗಿ ಹೆಚ್ಚಿನ ಮಹತ್ವನ್ನು ನೀಡುತ್ತಿದೆ. ಕಳಸ ಮಹಿಳಾ ಮಂಡಳಿಯು ಕಳಸಕ್ಕೆ ಒಂದು ಆಸ್ತಿಯಾಗಿದೆ ಎಂದು ಹೇಳಿದರು.

ಮಂಡಳಿಯ ಅಧ್ಯಕ್ಷೆ ಶೋಭ ದೇಸಾಯಿ, ಮಂಡಳಿಯ ಕಾರ್ಯದರ್ಶಿ ರಶ್ಮೀ ಎನ್.ಎಂ ಹರ್ಷ, ಪಾತಿಮಾ ರೆಹಮಾನ್, ವಾಣಿ ಅರವಿಂದ್, ಸುಶ್ಮಿತಾ ದಯಾಕರ್, ಸುಧಾ ಶಿವಪ್ರಸಾದ್ ಹಾಗೂ ಮಂಡಳಿಯ ಸದಸ್ಯರು ಇದ್ದರು.


