ಕಳಸ ಲೈವ್ ವರದಿ
ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ನಡೆಸಿದ್ದ ಜಿಲ್ಲಾ ಮಟ್ಟದಲ್ಲಿ ಆನ್ಲೈನ್ ರಸಪ್ರಶ್ನೆ ಸ್ಪರ್ಧೆಯಲ್ಲಿ ಕಳಸ ಪ್ರಬೋಧಿನಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು ಬಹುಮಾನ ಪಡೆದುಕೊಂಡಿದ್ದಾರೆ.

ದಿನಾಂಕ 2/10/22 ರಂದು ರಾಜ್ಯಾದಂತ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಳಸ ತಾಲೂಕು ಹಂತದಲ್ಲಿ ಕೆಪಿಎಸ್ ಕಳಸ, ಪ್ರಬೋಧಿನಿ ವಿದ್ಯಾಕೇಂದ್ರ, ಸ. ಪ್ರೌಢಶಾಲೆ ಹೊರನಾಡು ಶಾಲೆಗಳ 142 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅವರಲ್ಲಿ ಪ್ರಬೋಧಿನಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳಾದ ಸಿಂಚನ ಕೆ ಸಿ(ಪ್ರಥಮ), ಪ್ರಣೀತ(ದ್ವಿತೀಯ), ಶ್ರೀವಿದ್ಯಾ(ತೃತೀಯ) ಸ್ಥಾನ ಪಡೆದಿರುತ್ತಾರೆ.

ಕಳಸ ತಾಲೂಕು ರಸಪ್ರಶ್ನೆ ಸಂಯೋಜಕರಾಗಿ ಶ್ರೀ ಸಂದೇಶ್ ಶಿಕ್ಷಕರು ಕೆಪಿಎಸ್ ಪ್ರೌಢಶಾಲೆ ಕಳಸ, ಉಪಸಂಯೋಜಕರಾಗಿ ಶ್ರೀಮತಿ ರೇವತಿ ಶಿಕ್ಷಕರು ಕಲ್ಮಕ್ಕಿ ಇವರು ಜವಾಬ್ದಾರಿ ನಿರ್ವಹಿಸಿದ್ದಾರೆ.

