ಕಳಸ ಲೈವ್ ವರದಿ
ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಈ ಬಾರಿ ಸಾಮಾನ್ಯ ಜನರಿಗೂ ವೇದಿಕೆ ಕಲ್ಪಿಸುತ್ತಿರುವುದನ್ನು ಕಂಡು, ಕಳಸ ತಾಲ್ಲೂಕಿನ ಹೊರನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಳಕುಂಬ್ರಿ ನಿವಾಸಿ ಶಿವಕುಮಾರ್ ಭಟ್ ಬಿಡುಗಡೆ ಮಾಡಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊAಡ ವಿಡಿಯೋದಲ್ಲಿ
“ನಮಸ್ಕಾರ ಎಲ್ಲರಿಗೂ.
ಈ ಸಲ ಬಿಗ್ ಬಾಸ್ ಸಾಮಾನ್ಯ ಜನರಿಗೂ ಅವಕಾಶ ಮಾಡಿಕೊಟ್ಟಿದೆ. ಹಾಗಾಗಿ ಈ ಸಲ ಬಿಗ್ ಬಾಸ್ನಲ್ಲಿ ನಾನು ಸ್ಪರ್ಧಿಯಾಗೋಣ ಅಂತ ಅಂದುಕೊAಡಿದ್ದೀನಿ. ನಿಮ್ಮೆಲ್ಲರ ಶುಭ ಹಾರೈಕೆ ಇರಲಿ.
ನಮ್ಮದು ಚಿಕ್ಕಮಗಳೂರು ಜಿಲ್ಲೆ, ಕಳಸ ತಾಲ್ಲೂಕು, ಹೊರನಾಡು ಗ್ರಾಮ ಪಂಚಾಯಿತಿ. ನಮ್ಮ ಮನೆ ಹೆಸರು ಯಳಕುಂಬ್ರಿ ಅಂತ.ನನ್ನ ಹೆಸರು ಶಿವಕುಮಾರ್ ಭಟ್ ಅಂತ.
ನಾನು ಈ ಸಲ ಬಿಗ್ ಬಾಸ್ಗೆ ಯಾಕೆ ಹೋಗಬೇಕು ಅಂದ್ರೆ ನಮ್ಮ ಮನೆ ಸ್ವಲ್ಪ ರಿಪೇರಿ ಆಗಬೇಕು. 2019 ರಲ್ಲಿ ಸುರಿದ ಭಾರಿ ಮಳೆಯಿಂದಾಗಿ ನಮ್ಮ ಮನೆಗೆ ತೊಂದರೆಯಾಗಿತ್ತು. ಗುಡ್ಡದ ನೀರು ಭಾರಿ ಬಂದು ಮನೆಗೆ ಭಾರಿ ತೊಂದರೆಯಾಗಿತ್ತು. ಸರ್ಕಾರ ಆಗ್ಲಿ, ಸ್ಥಳೀಯ ಪಂಚಾಯಿತಿಯಾಗ್ಲಿ ನಮಗೆ ನೆರವು ಸಿಕ್ಕಿರಲಿಲ್ಲ. ಬಹಳ ಪ್ರಯತ್ನ ಪಟ್ಟೆ, ಎಷ್ಟೇ ಅಂದ್ರೂ ನಮಗೆ ಪರಿಹಾರ ಕೊಟ್ಟಿರಲಿಲ್ಲ.
ಹಾಗಾಗಿ, ಅದ್ರಲ್ಲಿ ಏನಾದ್ರೂ ಗೆದ್ದು ಬಂದ್ರೆ ಸ್ವಲ್ಪ ಮನೆ ರಿಪೇರಿ ಮಾಡಬಹುದು. ಮತ್ತು ನಮ್ಮ ರಸ್ತೆ ಅಭಿವೃದ್ಧಿ ಆಗಬೇಕು.ನಮ್ಮ ರಸ್ತೆ ಸರಿ ಇಲ್ಲ. ಹಾಗಾಗಿ ಅದಕ್ಕೂ ಸ್ವಲ್ಪ ದುಡ್ಡು. ಇಲ್ಲಿ ಬಂದು ಗೆದ್ದು 50 ಲಕ್ಷ ಬಂತು ಅಂದ್ರೆ 20 ಲಕ್ಷ ನನ್ನ ಸ್ವಂತಕ್ಕೆ ಬಳಸ್ತೀನಿ, 20 ಲಕ್ಷ ಸಾರ್ವಜನಿಕವಾಗಿ ರಸ್ತೆ ಅಭಿವೃದ್ಧಿ ಮಾಡಿಸ್ತೀನಿ.
ನಮ್ಮ ಹತ್ತಿರ ಸ್ವಲ್ಪ ದುಡ್ಡಿದ್ದರೆ ನಾವೇ ರಿಪೇರಿ ಮಾಡಬಹುದು ಹಾಗಾಗಿ ಅದೊಂದು ಆಸೆ ಇದೆ.
ಬಿಗ್ ಬಾಸ್ ಮನೆ ನೋಡಬೇಕು ಅಂತ ಆಸೆ. ಅರಮನೆ ನೋಡಬೇಕು ಅಂತ. ಹೌದು ಸರ್, ಅರಮನೆ ನೋಡಬೇಕು. ನಾವು ಸಣ್ಣ ಮನೆಯಲ್ಲಿ ಇದ್ದಿದ್ದು, ದೊಡ್ಡ ಮನೆಯಲ್ಲಿ ಒಂದು ದಿನ ಇದ್ದರೂ ನಮ್ಮದು ಅದೊಂದು ಪುಣ್ಯಾನೇ. ಅದೊಂದು ಭಾಗ್ಯ, ಯಾವ ಜನ್ಮದ ಪುಣ್ಯ ಅನ್ಕೋತೀವಿ ಒಂದು ದಿನ ಹೋಗಿ ಇದ್ದರೂ… ಒಂದು ಗಂಟೆ ಇದ್ದರೂ ನಮಗೆ ಸಂತೋಷನೇ. ಆ ಮನೆಯಲ್ಲಿ ನಾವು ಇರಬೇಕು ಅಂದ್ರೆ ಪುಣ್ಯ ಮಾಡಿರಬೇಕು. ಅಲ್ಲಿ ಹೋಗಿ…ಸಾಧಾರಣ ಮಟ್ಟಿಗೆ ಮನರಂಜನೆ ಕೊಡ್ತೀನಿ ಅಂತ ಅನ್ಕೊಂಡಿದ್ದೀನಿ.
ಹಾಗಾಗಿ, ಈ ಸಲ ಬಿಗ್ ಬಾಸ್ ಸ್ಪರ್ಧಿಯಾಗಿ ಹೋಗ್ತಾ ಇದ್ದೀನಿ, ನಿಮ್ಮೆಲ್ಲರ ಶುಭ ಹಾರೈಕೆ ಇರಲಿ.ಎಂಬ ಮಾತನ್ನು ಹೇಳಿದ್ದಾರೆ.
ಆದರೆ ಈ ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇದರ ಹಿಂದೆ ಒಬ್ಬ ಸಾಮಾನ್ಯ ಮಲೆನಾಡಿಗನ ಅಸಹಾಯಕತೆ, ಸರ್ಕಾರದ ಬೇಜವಾಬ್ದಾರಿತನ ಮತ್ತು ಸಾರ್ವಜನಿಕ ಕಳಕಳಿಯ ಒಳಾರ್ಥ ಎದ್ದು ಕಾಣುತ್ತಿದೆ.
ಶಿವಕುಮಾರ್ ಭಟ್ ತಮ್ಮ ಹೇಳಿಕೆಯಲ್ಲಿ 2019 ರ ಭೀಕರ ಮಳೆಯನ್ನು ನೆನಪಿಸಿಕೊಂಡಿದ್ದಾರೆ. ಆ ವರ್ಷ ಮಲೆನಾಡಿನಲ್ಲಿ ಸಂಭವಿಸಿದ ಮಹಾ ಮಳೆ ಮತ್ತು ಗುಡ್ಡ ಕುಸಿತದಿಂದಾಗಿ ಇವರ ಮನೆಗೆ ತೀವ್ರ ಹಾನಿಯಾಗಿತ್ತು. ಆದರೆ ದುರಂತವೆAದರೆ, ಘಟನೆ ನಡೆದು ಇಷ್ಟು ವರ್ಷಗಳಾದರೂ ಸರ್ಕಾರವಾಗಲಿ ಅಥವಾ ಸ್ಥಳೀಯ ಗ್ರಾಮ ಪಂಚಾಯಿತಿಯಾಗಲಿ ಇವರಿಗೆ ಯಾವುದೇ ಪರಿಹಾರ ಧನ ಅಥವಾ ನೆರವು ನೀಡಿಲ್ಲ. ಇಲಾಖೆಗಳಿಗೆ ಅಲೆದು ಅಲೆದು ಸುಸ್ತಾಗಿರುವ ಇವರ ಮಾತುಗಳು, ಗ್ರಾಮೀಣ ಭಾಗದಲ್ಲಿ ನೊಂದವರಿಗೆ ಪರಿಹಾರ ತಲುಪಿಸುವಲ್ಲಿ ಆಡಳಿತ ವ್ಯವಸ್ಥೆ ಎಷ್ಟು ವಿಫಲವಾಗಿದೆ ಎಂಬುದನ್ನು ಸಾಬೀತುಪಡಿಸುತ್ತವೆ.
ಬಿಗ್ ಬಾಸ್ನಲ್ಲಿ ಗೆದ್ದು 50 ಲಕ್ಷ ರೂಪಾಯಿ ಬಂದರೆ, ಅದರಲ್ಲಿ 20 ಲಕ್ಷವನ್ನು ನನ್ನ ಸ್ವಂತದ ಮನೆ ರಿಪೇರಿಗೆ ಬಳಸಿ, ಇನ್ನುಳಿದ 20 ಲಕ್ಷ ರೂಪಾಯಿಯನ್ನು ಸಾರ್ವಜನಿಕ ರಸ್ತೆ ಅಭಿವೃದ್ಧಿಗೆ ಬಳಸುತ್ತೇನೆ ಎಂಬ ಶಿವಕುಮಾರ್ ಅವರ ಮಾತು ಇಡೀ ವರದಿಯ ಅತ್ಯಂತ ಮಹತ್ವದ ಭಾಗವಾಗಿದೆ. ತನ್ನದೇ ಮನೆ ಕಷ್ಟದಲ್ಲಿದ್ದರೂ, ತನ್ನ ಗ್ರಾಮದ ರಸ್ತೆ ಸರಿ ಇಲ್ಲ ಎಂಬ ಕಳಕಳಿ ಇವರಿಗಿದೆ. ದಿನನಿತ್ಯ ಜನಪ್ರತಿನಿಧಿಗಳ ಮುಂದೆ ರಸ್ತೆಗಾಗಿ ಕೈಯೊಡ್ಡಿ ನಿಲ್ಲುವ ಬದಲು, ತಾನೇ ಗೆದ್ದು ಬಂದು ರಸ್ತೆ ಮಾಡಿಸುತ್ತೇನೆ ಎನ್ನುವ ಇವರ ನಿರ್ಧಾರ, ವ್ಯವಸ್ಥೆಯ ಮೇಲಿನ ತೀವ್ರ ಆಕ್ರೋಶ ಮತ್ತು ಹತಾಶೆಯನ್ನು ತೋರ್ಪಡಿಸುತ್ತದೆ.
ನಮ್ಮ ಹತ್ತಿರ ದುಡ್ಡಿದ್ದರೆ ಅವರವರ ಬಳಿ ಹೋಗಿ ಅಲ್ಲಿ ರಿಪೇರಿ ಮಾಡಿ ಇಲ್ಲಿ ರಿಪೇರಿ ಮಾಡಿ ಎಂದು ಕೇಳುವ ಅಗತ್ಯವಿರಲಿಲ್ಲ ಎನ್ನುವ ಮೂಲಕ, ಪ್ರತಿಯೊಂದು ಸಣ್ಣ ಕೆಲಸಕ್ಕೂ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಹಿಂದೆ ಅಲೆಯಬೇಕಾದ ಸಾಮಾನ್ಯ ಜನರ ದೈನಂದಿನ ನರಕಯಾತನೆಯನ್ನು ಶಿವಕುಮಾರ್ ಬಿಚ್ಚಿಟ್ಟಿದ್ದಾರೆ. ಸ್ವಾಭಿಮಾನದಿಂದ ಬದುಕಲು ಹಣದ ಅನಿವಾರ್ಯತೆ ಎಷ್ಟು ಮುಖ್ಯ ಎಂಬುದನ್ನು ಈ ಮಾತು ಧ್ವನಿಸುತ್ತದೆ.
ಕೊನೆಯದಾಗಿ ಬಡತನದ ಸಣ್ಣ ಮನೆಯಲ್ಲಿ ಕಾಲ ಕಳೆದ ತಮಗೆ, ಬಿಗ್ ಬಾಸ್ನಂತಹ ಅರಮನೆಯಂತಹ ದೊಡ್ಡ ಮನೆಯಲ್ಲಿ ಕನಿಷ್ಠ ಒಂದು ಗಂಟೆ ಕಾಲ ಕಳೆದರೂ ಅದು ಜನ್ಮದ ಪುಣ್ಯ ಎಂದು ಭಾವಿಸುವ ಅವರ ಭಾವುಕತೆ ಎಲ್ಲರ ಕಣ್ಣಾಲಿಗಳನ್ನು ತುಂಬಿ ಬರುವಂತೆ ಮಾಡುತ್ತದೆ. ಜೊತೆಗೆ, ತಮಗಿರುವ ದೇಶಿ ಪ್ರತಿಭೆಯ ಮೂಲಕ ಜನರಿಗೆ ಸಾಧಾರಣ ಮಟ್ಟದ ಮನರಂಜನೆ ಕೊಡುವ ಭರವಸೆಯನ್ನೂ ಅವರು ನೀಡಿದ್ದಾರೆ.
ಕಳಸದ ಶಿವಕುಮಾರ್ ಭಟ್ ಅವರ ಈ ವೀಡಿಯೊ ಕೇವಲ ಬಿಗ್ ಬಾಸ್ ಆಡಿಷನ್ಗೆ ಸೀಮಿತವಾಗಿಲ್ಲ. ಇದು ಕಳಸ ತಾಲ್ಲೂಕಿನ ಗ್ರಾಮೀಣ ಭಾಗದ ರಸ್ತೆಗಳ ದುಃಸ್ಥಿತಿ ಮತ್ತು ಪ್ರಕೃತಿ ವಿಕೋಪಕ್ಕೆ ತುತ್ತಾದ ಸಂತ್ರಸ್ತರ ಇಂದಿನ ವಾಸ್ತವ ಸ್ಥಿತಿಯನ್ನು ಇಡೀ ರಾಜ್ಯಕ್ಕೆ ಸಾರುವ ಒಂದು ಮೂಕ ಪ್ರತಿಭಟನೆಯಾಗಿದೆ. ಮನರಂಜನಾ ಲೋಕ ಇವರಿಗೆ ಆಸರೆ ನೀಡುತ್ತದೋ ಇಲ್ಲವೋ ಗೊತ್ತಿಲ್ಲ, ಆದರೆ ಈಗಲಾದರೂ ಸ್ಥಳೀಯ ಆಡಳಿತ ಮತ್ತು ಜನಪ್ರತಿನಿಧಿಗಳು ಇವರ ಯಳಕುಂಬ್ರಿ ಭಾಗದ ರಸ್ತೆ ಮತ್ತು ಮನೆ ರಿಪೇರಿಯತ್ತ ಗಮನ ಹರಿಸಬೇಕಿದೆ.
