ಕಳಸ ಲೈವ್ ವರದಿ
ಕಳಸ ತಾಲ್ಲೂಕಿನ ಸಂಸೆ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾಗಿ ಶ್ರೀ ಮತಿ ಪ್ರತಿಮಾ ಜೈನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಉಪಾಧ್ಯಕ್ಷರಾಗಿದ್ದ ಜಲಜಾಕ್ಷಿ ಕಳೆದ ಕೆಲ ದಿನಗಳ ಹಿಂದೆ ರಾಜಿನಾಮೆಯನ್ನು ನೀಡಿದ್ದರು.

ತೆರವಾದ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಚುನಾಯಿತ ಅಭ್ಯರ್ಥಿ ಪ್ರತಿಮಾ ಜೈನ್ ಇವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಇದರೊಂದಿಗೆ ಸಂಸೆ ಗ್ರಾಮ ಪಂಚಾಯಿತಿಯ ಅಧ್ಯಕ್ಷ ರವಿ ಕಳಕ್ಕೋಡು, ಉಪಾಧ್ಯಕ್ಷೆ ಶ್ರೀಮತಿ ಪ್ರತಿಮಾ ಜೈನ್ ಅಧಿಕಾರದಲ್ಲಿದ್ದಾರೆ.

ಈ ಸಂದರ್ಭದಲ್ಲಿ ರಾಜಕೀಯ ಮುಖಂಡರುಗಳಾದ ಕೆ.ಆರ್.ಪ್ರಭಾಕರ್, ಕೆ.ಎ.ಶ್ರೇಣಿಕ್, ವಿಶ್ವನಾಥ ಮರಸಣಿಗೆ, ಮಹಮ್ಮದ್ ರಫಿಕ್, ವೀರೇಂದ್ರ ಜೈನ್, ಸುಜಿತ್, ಜಗದೀಶ್, ಗಣೇಶ್ ಭಟ್ ಇತರರು ಅಭಿನಂದನೆ ಸಲ್ಲಿಸಿದರು.

