ಕಳಸ ಲೈವ್ ವರದಿ
ಎಸ್.ಕೆ.ಮೇಗಲ್ ಪ್ರದೇಶದಿಂದ ಹೊರಟ ಕಾಡಾನೆಗಳು ಕಳಕೋಡಿಗೆ ಬಂದು ಅಲ್ಲಿಂದ ಶುಕ್ರವಾರದ ರಾತ್ರಿ ಕಳಸದ ಕಡೆಗೆ ಹೊರಟು ಶನಿವಾರ ಬೆಳಗಿನಜಾವ ಕೊಳಮೆಗೆ ಪ್ರದೇಶದಲ್ಲಿ ಕಂಡು ಬಂದಿವೆ.

ಅಲ್ಲಿನ ಭಾಸ್ಕರ್ ಗೌಡರವರ ತೋಟಕ್ಕೆ ನುಗ್ಗಿದ ಆನೆಗಳು ಬಾಳೆ, ಅಡಿಕೆ ಗಿಡಗಳನ್ನು ತಿಂದು, ಗದ್ದೆಯನ್ನು ಹಾಳು ಮಾಡಿ ಅಬ್ಬುಗುಡಿಗೆ ಕಡೆಗೆ ಹೊರಟಿವೆ.

ತಿಂಗಳ ಹಿಂದೆ ಭದ್ರಾ ಅಭಯಾರಣ್ಯದಿಂದ ಹೊರಟು 2 ಗಂಡಾನೆಗಳು ಕಳಸದ ಕಡೆಗೆ ಬಂದಿವೆ.ಹಳುವಳ್ಳಿ, ಕಳಸ, ಅಬ್ಬುಗುಡಿಗೆ, ಹೊಸೂರು, ಕೊಳಮಗೆ, ಕಳಕೋಡು, ಈಚಲಹೊಳೆ, ನೆಲ್ಲಿಬೀಡು, ಜಾಂಬಳೆ, ಕುದುರೆಮುಖ ಮೂಲಕ ಬಿಳಗಲ್ವರೆಗೆ ತಲುಪಿದ್ದ ಆನೆಗಳು ಈಗ ಅಲ್ಲಿಂದ ಕಳಸದ ಕಡೆಗೆ ಮರಳಿವೆ.

ಆನೆಗಳು ಸಾಗಿದ ದಾರಿಯುದ್ದಕ್ಕೂ ಕೃಷಿಕರ ಸಾಕಷ್ಟು ಬೆಳೆಗಳನ್ನು ಕೂಡ ಹಾನಿ ಮಾಡಿವೆ
‘ಕೃಷಿಕರು ಹೆಚ್ಚಿನ ಗದ್ದಲ ಮಾಡದಿದ್ದರೆ ಅವು ಶೀಘ್ರವೇ ಮರಳಿ ಭದ್ರಾ ಅರಣ್ಯಕ್ಕೆ ಸೇರಲಿವೆ.ಆನೆಗಳು ತಾವು ಬಂದ ಹಾದಿಯನ್ನೇ ಹಿಡಿದು ಹೊರಟಿವೆ.ಆನೆಗಳ ಹಾದಿ ಬದಲಾಗುವಂತೆ ಯಾರು ಕೂಡ ಅವುಗಳನ್ನು ಬೆದರಿಸಬಾರದು’ ಎಂದು ಅರಣ್ಯ ಇಲಾಖೆ ಕೃಷಿಕರಲ್ಲಿ ಕೋರಿದೆ.


