ಕಳಸ ಲೈವ್ ವರದಿ
ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಸೇಷನ್(ಕೆಟಿಡಿಒ)ಚಿಕ್ಕಮಗಳೂರು. ಕಳಸ ತಾಲೂಕು ಸಭೆ ಕಳಸದ ದುರ್ಗಾಮಂಟಪದಲ್ಲಿ ನಡೆಯಿತು.
ಬಾಡಿಗೆ ಮಾಡುವ ವೈಟ್ ಬೋರ್ಡ್ ವಾಹನಗಳಿಂದ ಎಲ್ಲೋ ಬೋರ್ಡ್ ವಾಹನ ಮಾಲಕರಿಗೆ ಆಗುವಂತಹ ತೊಂದರೆಗಳ ಬಗ್ಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಕಳಸ ಹಾಗೂ ಕುದುರೆಮುಖ ಠಾಣೆಗಳಲ್ಲಿ ದೂರು ನೀಡುವುದು ಹಾಗೂ ಚಿಕ್ಕಮಗಳೂರು ಜಿಲ್ಲಾಧಿಕಾರಿ, ಎಸ್ಪಿ ಹಾಗೂ ಆರ್ಟಿಓ ಅಧಿಕಾರಿಗಳಿಗೆ ಮನವಿ ಕೊಡುವುದಾಗಿಯೂ ಚರ್ಚಿಸಲಾಯಿತು.
ಕಳಸದ ವೈಟ್ ಬೋರ್ಡಿನಿಂದ ಎಲ್ಲೋ ಬೋರ್ಡಿಗೆ ಬದಲಾವಣೆಯಾದ ಕಳಸದ ಜೀಪ್ ಚಾಲಕರು ಹಾಗೂ ಮಾಲಕರು ಭಾಗವಹಿಸಿದ್ದರು.
ಈ ಸಭೆಯಲ್ಲಿ ಕಳಸದ ಹಿರಿಯ ಚಾಲಕರು ಹಾಗೂ ಮಾಲಕರಾದ ನಾರಾಯಣ ಶೆಟ್ಟಿ, ಕಳಸದ ಜೀಪ್ ಚಾಲಕರು ಮಾಲಕರು ಕೆಟಿಡಿಒ ಸಂಸ್ಥೆಯ ಜಿಲ್ಲಾ ಗೌರವಾಧ್ಯಕ್ಷ ಮರಸಣಿಗೆ ರಾಜೇಶ್, ಜಿಲ್ಲಾ ಉಪಾಧ್ಯಕ್ಷ ಗಿರೀಶ್.ಆರ್ ಮತ್ತು ಕಳಸದ ಕೆಟಿಡಿಒ ಸದಸ್ಯರು ಭಾಗವಹಿಸಿದ್ದರು.



