ಕಳಸ ಮಂಗಳವಾರ ಸಂಜೆ ಹೊರನಾಡು ಸಮೀಪದಲ್ಲಿ ಸಂಭವಿಸಿದ ಜೀಪ್ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಹೊಸಗದ್ದೆಯ ಧರ್ಮೇಂದ್ರ ಶೆಟ್ಟಿ ಅವರ ಪತ್ನಿ ಅಕ್ಷತಾ(35) ಮೃತಪಟ್ಟ ದುರ್ದೈವಿ.
ಸಂಜೆ 5.30ಗೆ ಹೊಸಗದ್ದೆಯ ತಮ್ಮ ಮನೆಯಿಂದ ಹೊರನಾಡಿಗೆ ಸ್ವತಃ ಜೀಪ್ ಚಲಾಯಿಸಿಕೊಂಡು ಒಬ್ಬರೇ ಹೊರಟಿದ್ದರು.ಮನೆಯಿಂದ ಸ್ವಲ್ಪ ದೂರದಲ್ಲಿ ಇದ್ದ ಹಳ್ಳದ ಬದಿ ಬರುವಾಗ ಜೀಪ್ ಹತೋಟಿ ತಪ್ಪಿ ಹಳ್ಳಕ್ಕೆ ಬಿದ್ದಿದೆ.
ಜೀಪ್ ಪಲ್ಟಿಯಾಗಿ ಆನಂತರ ಹಳ್ಳದ ನೀರಿಗೆ ಬಿದ್ದಿದೆ.ಸ್ವಲ್ಪ ಹೊತ್ತಿನಲ್ಲಿ ಸ್ಥಳೀಯರು ಧಾವಿಸಿ ಅವರನ್ನು ರಕ್ಷಿಸುವ ಯತ್ನ ನಡೆಸಿದರೂ ಪ್ರಾಣ ಹೋಗಿತ್ತು ಎಂದು ತಿಳಿದುಬಂದಿದೆ.
ಮೃತ ಅಕ್ಷತಾ ಅವರಿಗೆ 6 ಮತ್ತು 12 ವರ್ಷದ ಇಬ್ಬರು ಪುತ್ರಿಯರು ಇದ್ದಾರೆ.
