ಕಳಸ ಲೈವ್ ವರದಿ
ಕಳೆದ ಕೆಲ ತಿಂಗಳುಗಳಿಂದ ಕಳಸದ ಗ್ರಾಮೀಣ ಪ್ರದೇಶದಲ್ಲಿ ಸಂಚರಿಸುತ್ತಿರುವ ಎರಡು ಕಾಡಾನೆಗಳು ಭಾನುವಾರದ ರಾತ್ರಿ ಕಳಸ ಪಟ್ಟಣ ಸಮೀಪ ಇರುವ ಆನೆಗುಡ್ಡ ಹೋಂ ಸ್ಟೇ ಬಳಿ ಬಂದಿದೆ.

ರಾತ್ರಿ ಹೋಂ ಸ್ಟೇ ಬಳಿ ಬಂದ ಆನೆಗಳು ನಂತರ ಇಲ್ಲಿಯ ತೋಟಕ್ಕೆ ನುಗ್ಗಿ ಅಡಕೆ, ಬಾಳೆ ಕೃಷಿ ನಾಶ ಮಾಡಿವೆ.ಈ ಪ್ರದೇಶದಲ್ಲಿ ಸಾಕಷ್ಟು ಮನೆಗಳಿದ್ದು, ಪ್ರಥಮ ದರ್ಜೆ ಕಾಲೇಜು ಕೂಡ ಇದೆ.
ಗ್ರಾಮೀಣ ಪ್ರದೇಶದಲ್ಲಿ ತಿರುಗಾಡುತ್ತಿದ್ದ ಆನೆಗಳು ಈಗ ಕಳಸ ಪೇಟೆ ಕಡೆ ಮುಖ ಮಾಡಿದ್ದು, ಸ್ಥಳಿಯರಿಗೆ ಮತ್ತಷ್ಟು ಭಯವನ್ನುಂಟು ಮಾಡಿದೆ.




