ಕಳಸ ಲೈವ್ ವರದಿ
ಅಪರಾಧಗಳನ್ನು ನಿಯಂತ್ರಿಸುವಲ್ಲಿ ಪೊಲೀಸ್ ರಷ್ಟೆ ಪ್ರಮುಖವಾದ ಜವಾಬ್ದಾರಿ ಸಾರ್ವಜನಿಕರಿಗೂ ಇರುತ್ತದೆ ಎಂದು ಕಳಸ ಪೊಲೀಸ್ ಠಾಣೆ ಸಹಾಯಕ ಸಬ್ ಇನ್ಸ್ಪೆಕ್ಟರ್ ಡಾ. ಸಿ.ಆರ್ ಮೋಹನ್ ಕುಮಾರ್ ಹೇಳಿದರು.

ಅವರು ಬುಧವಾರ ಕಳಸ ಪೊಲೀಸ್ ಠಾಣಾ ಸರಹದ್ದಿನ ಹಿರೇಬೈಲ್ ಪಟ್ಟಣದಲ್ಲಿ ಫ್ರೆಂಡ್ಸ್ ಆಟೋ ಸಂಘ ಹಾಗೂ ಚಿಕ್ಕಮಗಳೂರು ಜಿಲ್ಲಾ ಪೆÇಲೀಸ್. ಕುದುರೆಮುಖ ವೃತ್ತ ಕಳಸ ಪೊಲೀಸ್ ಠಾಣೆ ವತಿಯಿಂದ ಸಾರ್ವಜನಿಕ ರಿಗೆ ಮತ್ತು ಆಟೋ ಚಾಲಕರಿಗಾಗಿ ಏರ್ಪಡಿಸಿದ್ದ ಅಪರಾಧ ತಡೆ ಮಾಸಾಚರಣೆ ಜಾಗೃತಿ ಕಾರ್ಯಕ್ರಮ ದಲ್ಲಿ ಮಾತನಾಡಿದರು.

ಅಪರಾಧ ತಡೆಯುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯ ವಾಗಿದೆ. ಅಪರಾಧ ನಿಯಂತ್ರಣಕ್ಕೆ ನಾಗರಿಕರು ಸಹಕಾರ ನೀಡಿದ್ದೆ ಆದರೆ ಸಂಪೂರ್ಣ ವಾಗಿ ಅಪರಾಧ ಗಳನ್ನು ತಡೆಯುವ ಉದ್ದೇಶ ದಿಂದ ಉತ್ತಮವಾದ ಕಾನೂನು ಸುವ್ಯವಸ್ಥೆ ಯನ್ನು ಕೈ ಗೊಳ್ಳಬಹುದು ಎಂದರು.

ಸಾರ್ವಜನಿಕರು ಎಲ್ಲಿಯವರೆಗೆ ಮೋಸ ಹೋಗುತ್ತಾರೋ ಅಲ್ಲಿಯವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ ಆದ್ದರಿಂದ ಸಾರ್ವಜನಿಕರು ಪೊಲೀಸ್ ರಿಗೆ ಮಾಹಿತಿ ನೀಡಿ ಎಂದರು.
ಫ್ರೆಂಡ್ಸ್ ಆಟೋ ಸಂಘ ದ ಅಧ್ಯಕ್ಷ ಚಂದ್ರು, ಶಂಕರೇಗೌಡ, ಉಮೇಶ್, ಸಂತೋಷ, ಸುಕುಮಾರ್, ಪ್ರಕಾಶ್, ಸತೀಶ್, ಶ್ರೀಧರ್, ಸಾರ್ವಜನಿಕರು ಭಾಗವಸಿದ್ದರು.



