ಕಳಸ ಲೈವ್ ವರದಿ
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕದ ರಾಜ್ಯ ಕಾರ್ಯದರ್ಶಿಯಾಗಿ ಒಂದು ವರ್ಷ ಕಾರ್ಯ ನಿರ್ವಹಿಸಿರುವ ಮಣಿಕಂಠ ಕಳಸ ಅವರು ಕರ್ನಾಟಕ ಉತ್ತರದ ರಾಜ್ಯ ಕಾರ್ಯದರ್ಶಿಯಾಗಿ , ಬೆಳಗಾವಿಯಲ್ಲಿ ನಡೆದ 42 ನೇ ರಾಜ್ಯ ಸಮ್ಮೇಳನದಲ್ಲಿ ಜಿರಗೆ ಸಭಾಂಗಣದಲ್ಲಿ ಜವಾಬ್ದಾರಿಯನ್ನು ಸ್ವೀಕರಿಸಿದ್ದಾರೆ .
ವಿದ್ಯಾರ್ಥಿ ಪರಿಷತ್ ನಲ್ಲಿ ಹಲವಾರು ವರ್ಷಗಳಿಂದ ವಿವಿಧ ಜವಾಬ್ದಾರಿಯನ್ನು ನಿರ್ವಹಿಸಿ 2 ನೇ ಬಾರಿಗೆ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುತ್ತಾರೆ .
ಮೊದಲು ಮಂಗಳೂರನ್ನು ಕೇಂದ್ರವಾಗಿರಿಸಿಕೊಂಡು ಎಬಿವಿಪಿ ಕೆಲಸವನ್ನು ಮಾಡುತ್ತಿದ್ದ ಇವರು , ಪ್ರಸ್ತುತ ಹುಬ್ಬಳ್ಳಿಯನ್ನು ಕೇಂದ್ರವಾಗಿರಿಸಿಕೊಂಡು ಎಬಿವಿಪಿ ಕೆಲಸ ಮಾಡಲಿದ್ದಾರೆ .
ಇದೇ ಸಂಧರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಲದವರಾದ ಡಾ. ರೋಹಿಣಾಕ್ಷ ಶಿರ್ಲಾಲು ಅವರು ರಾಜ್ಯಾಧ್ಯಕ್ಷರಾಗಿ ಜವಾಬ್ದಾರಿಯನ್ನು ಸ್ವೀಕರಿಸಿದ್ದಾರೆ .
ಮೂರು ದಿನಗಳ ಕಾಲ ರಾಜ್ಯ ಸಮ್ಮೇಳನವು ಬೆಳಗಾವಿಯಲ್ಲಿ ನಡೆಯಿತು , ಇದರ ಉದ್ಘಾಟನೆಯನ್ನು ಸಂಸದೀಯ ವ್ಯವಹಾರಗಳ ಕೇಂದ್ರಿಯ ಸಚಿವರಾದ ಶ್ರೀ ಪ್ರಹ್ಲಾದ್ ಜೋಷಿ ಅವರು ಉದ್ಘಾಟಿಸಿದರು , ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಶ್ರೀ ಆಶಿμï ಚೌವ್ಹಾಣ್ ಅವರು ಉಪಸ್ಥಿತರಿದ್ದರು.