ಕಳಸ ಲೈವ್ ವರದಿ
ಕಳೆದ ಹಲವು ದಿನಗಳಿಂದ ಬಿರುಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಕಳಸ ತಾಲ್ಲೂಕಿನ ಜನತೆಗೆ ವರುಣದೇವ ತಂಪೆರೆದಿದ್ದಾನೆ. ಕಾಕತಾಳೀಯ ಎಂಬAತೆ, ಇಲ್ಲಿನ ಐತಿಹಾಸಿಕ ಶ್ರೀ ಕಲಶೇಶ್ವರ ಸ್ವಾಮಿಗೆ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿದ ಕೇವಲ ನಾಲ್ಕೂವರೆ ಗಂಟೆಗಳ ಅಂತರದಲ್ಲಿ ಗುಡುಗು ಸಹಿತ ಭಾರಿ ಮಳೆ ಸುರಿದು ಇಡೀ ಪರಿಸರ ತಂಪಾಗಿದೆ.
ಬಿಸಿಲಿನ ತಾಪದಿಂದ ಜಲಮೂಲಗಳು ಬತ್ತಿ ಹೋಗುತ್ತಿದ್ದುದನ್ನು ಕಂಡು, ಮಳೆಗಾಗಿ ಪ್ರಾರ್ಥಿಸಿ ಭಾನುವಾರ ದೇವಸ್ಥಾನದಲ್ಲಿ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕಲಶೇಶ್ವರ ಸ್ವಾಮಿಗೆ ಶತಾವಾರ ರುದ್ರಾಭಿಷೇಕ ಹಾಗೂ ಏಕದಶ ರುದ್ರಹೋಮ. ಸರ್ವಾಂಗಸುAದರಿ ಅಮ್ಮನವರಿಗೆ ಸಹಸ್ರ ಕುಂಕುಮಾರ್ಚನೆ. ಆನೆವಿಘ್ನೇಶ್ವರ ಸ್ವಾಮಿಗೆ ಚರುಬಲಿ ಸೇವೆ.
ಈ ಎಲ್ಲಾ ಧಾರ್ಮಿಕ ವಿಧಿವಿಧಾನಗಳ ನಂತರ ಲೋಕಕಲ್ಯಾಣಕ್ಕಾಗಿ ಹಾಗೂ ಮಳೆಗಾಗಿ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ವಿಶೇಷ ಪೂಜೆ ಮುಗಿದ ಕೆಲವೇ ಗಂಟೆಗಳಲ್ಲಿ ಕಳಸದ ಆಕಾಶದಲ್ಲಿ ಮೋಡಗಳು ಕವಿದು, ಸಂಜೆಯಾಗುತ್ತಿದ್ದAತೆ ಜೋರಾದ ಗುಡುಗು ಹಾಗೂ ಆಲಿಕಲ್ಲು ಸಹಿತ ಮಳೆ ಆರಂಭವಾಯಿತು. ಕಳಸ ಪಟ್ಟಣ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಲ್ಲೂ ಉತ್ತಮ ಮಳೆಯಾಗಿದ್ದು, ಭೂಮಿ ತಂಪಾಗಿದೆ.
ಹಲವು ದಿನಗಳಿಂದ ಮಳೆಯಿಲ್ಲದೆ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿತ್ತು. ತೀವ್ರ ಬಿಸಿಲಿನಿಂದ ಬೆಳೆಗಳು ಒಣಗುವ ಭೀತಿಯಲ್ಲಿದ್ದ ರೈತರಿಗೆ ಈ ಮಳೆ ಸಂಜೀವಿನಿಯAತೆ ಬಂದಿದೆ. ಈ ಘಟನೆಯನ್ನು ಕಂಡ ಭಕ್ತರು, ಇದು ಕಲಶೇಶ್ವರ ಸ್ವಾಮಿಯ ಪವಾಡ ಮತ್ತು ಭಕ್ತರ ಪ್ರಾರ್ಥನೆಗೆ ಸಿಕ್ಕ ಪ್ರತಿಫಲ” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ, ಈ ಅನಿರೀಕ್ಷಿತ ಮಳೆಯು ಕಳಸದ ಜನರಲ್ಲಿ ಹೊಸ ಉತ್ಸಾಹವನ್ನು ತುಂಬಿದ್ದು, ಬೇಸಿಗೆಯ ಬಿಸಿಲಿನಿಂದ ತಾತ್ಕಾಲಿಕ ಮುಕ್ತಿ ನೀಡಿದೆ.
