ಕಳಸ ಲೈವ್ ವರದಿ
ಕಳಸ ತಾಲ್ಲೂಕು ಕೇಂದ್ರವಾಗಿ ಘೋಷಣೆಯಾಗಿ 2 ವರ್ಷ ಕಳೆದಿದೆ.ಆದರೆ ನಾಮಕಾವಸ್ಥೆಗೆ ತಹಸೀಲ್ದಾರ್ ಹುದ್ದೆಗೆ ನೇಮಕ ಮಾಡಿದ್ದು ಬಿಟ್ಟರೆ ಬೇರೆ ಯಾವುದೇ ಕೆಲಸ ಆಗಿಲ್ಲ ಎಂದೂ ನಿಂಗಯ್ಯ ಅಸಮಾಧಾನ ಹೊರಹಾಕಿದರು.

ಕಳಸಕ್ಕೆ ಮಂಗಳವಾರ ಆಗಮಿಸಿ ನಂತರ ಮಾತನಾಡಿದ ಅವರು ಕಳಸ ತಾಲ್ಲೂಕು ಕೇಂದ್ರವನ್ನಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿದ್ದಾರೆ. ಆದರೆ ತಾಲ್ಲೂಕು ಕೇಂದ್ರ ಆದ ನಂತರ ಪೂರ್ಣ ಪ್ರಮಾಣದ ತಾಲ್ಲೂಕು ಕೇಂದ್ರವನ್ನಾಗಿ ಮಾಡಲು ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ ಎಂದು ಟೀಕೆ ಮಾಡಿದ ಅವರು ಕಳಸ ತಾಲ್ಲೂಕಿಗೆ ತಹಶೀಲ್ದಾರ್ ಒಬ್ಬರು ಬಂದಿರೋದು ಬಿಟ್ಟರೆ ಬೆರೇನೂ ಆಗಲಿಲ್ಲ. ಕಳಸದ ಜನರ ಮೂಡಿಗೆರೆ ಅಲೆದಾಟ ಇನ್ನೂ ತಪ್ಪಿಲ್ಲ. ಕಳಸದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ತೆರೆದಿಲ್ಲ. ಮೂಡಿಗೆರೆಯಲ್ಲೂ ಕಳಸದ ಸ್ವತ್ತುಗಳ ನೊಂದಣಿ ಆಗುತ್ತಿಲ್ಲ. ಇಂತಹ ಸಂಕಷ್ಟ ಇದ್ದರೂ ಶಾಸಕ ಮತ್ತು ಜಿಲ್ಲಾಡಳಿತ ಮೌನವಾಗಿದ್ದು ಜನರ ಕಷ್ಟವನ್ನು ದುಪ್ಪಟ್ಟು ಮಾಡುತ್ತಿದ್ದಾರೆ, ಇದರಲ್ಲಿ ಶಾಸಕರು ಸಂಪೂರ್ಣವಾಗಿ ನಿಷ್ಕ್ರೀಯವಾಗಿದ್ದಾರೆ ಎಂದೂ ನಿಂಗಯ್ಯ ಟೀಕಿಸಿದರು.

ಕೂಡಲೇ ಕಳಸವನ್ನು ಪೂರ್ಣ ಪ್ರಮಾಣದ ತಾಲ್ಲೂಕು ಕೇಂದ್ರವನ್ನಾಗಿ ಮಾಡಬೇಕು ಇಲ್ಲವಾದರೆ ಜೆಡಿಎಸ್ ಪಕ್ಷ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.
ಈ ಸಂದರ್ಬದಲ್ಲಿ ಜೆಡಿಎಸ್ ಮುಖಂಡರಾದ ಮಂಜಪ್ಪಯ್ಯ, ಸಂತೋμï, ಜ್ವಾಲನಯ್ಯ, ಆಶಾಲತಾ, ಅರುಣ್, ಭಾಸ್ಕರ್ ಇದ್ದರು.






