ಕಳಸ ಲೈವ್ ವರದಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ), ಕಳಸ-ಶೃಂಗೇರಿ ತಾಲೂಕು ಹಾಗೂ ಶಾಂತಿವನ ಟ್ರಸ್ಟ್ (ರಿ) ವತಿಯಿಂದ 46ನೇ ಬೃಹತ್ ಬೇಸಿಗೆ ಯೋಗೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಬೃಹತ್ ಯೋಗ ಶಿಬಿರವು ದಿನಾಂಕ 16/04/2026 ರಂದು ಬೆಳಿಗ್ಗೆ 10:00 ಗಂಟೆಗೆ ಕಳಸದ ಶ್ರೀ ಕಲ್ಯಾಣ ಕಲಶೇಶ್ವರ ಸಭಾಭವನದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಳ್ಳಲಿದೆ.
ತಾಲೂಕಿನಾದ್ಯಂತ ಒಟ್ಟು 50 ಕೇಂದ್ರಗಳಲ್ಲಿ ಏಕಕಾಲದಲ್ಲಿ ಸಾರ್ವಜನಿಕರಿಗಾಗಿ ಯೋಗಾಸನ, ಪ್ರಾಣಾಯಾಮ ಹಾಗೂ ಧ್ಯಾನ ಶಿಬಿರಗಳು ನಡೆಯಲಿವೆ.
ಏಪ್ರಿಲ್ 16ರ ಸಂಜೆಯಿAದ ಏಪ್ರಿಲ್ 22ರ ಬೆಳಿಗ್ಗೆಯವರೆಗೆ.
ಕಳಸ ಪೇಟೆಯ ಶ್ರೀ ಸಾಯಿ ಮಂದಿರ ಆವರಣ.ಹೊರನಾಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಭವನ.ಕಾರಗದ್ದೆಯ ಶ್ರೀ ವೀರನಾರಾಯಣ ಸಭಾಭವನ.ಮೇಘಲ್ನ ಶ್ರೀ ವಿದ್ಯಾಗಣಪತಿ ಸಭಾಭವನ.ಸಂಸೆಯ ತ್ರೈರತ್ನ ಭವನ ಸಂಸೆ.ಬೆಳ್ಳದ ಬಸ್ರಿಕಲ್ ವಿದ್ಯಾಗಣಪತಿ ಸಭಾಭವನ.ನೆಲ್ಲಿಬೀಡು ಕನ್ನಡ ಜ್ಯೋತಿ ಸಭಾಭವನ.ಈ ಎಲ್ಲಾ ಕೇಂದ್ರಗಳಲ್ಲಿ ನುರಿತ ಯೋಗ ಶಿಕ್ಷಕರಿಂದ ಪ್ರತಿದಿನ ಒಂದು ಗಂಟೆಯ ಕಾಲ ಯೋಗಾಭ್ಯಾಸ ತರಬೇತಿ ನೀಡಲಾಗುವುದು.
ಮಕ್ಕಳಿಗಾಗಿ ಪಂಚಮುಖಿ ವ್ಯಕ್ತಿತ್ವ ವಿಕಸನ ಶಿಬಿರ
ಶಾಲಾ ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ಪಂಚಮುಖಿ ವ್ಯಕ್ತಿತ್ವ ವಿಕಸನ ಯೋಗ ಶಿಬಿರ ವನ್ನು ಕಳಸದ ಪ್ರಭೋದಿನಿ ವಿದ್ಯಾ ಕೇಂದ್ರದಲ್ಲಿ ಆಯೋಜಿಸಲಾಗಿದೆ.
ದಿನಾಂಕ: 17/04/2026 (ಶುಕ್ರವಾರ) ರಿಂದ 21/04/2026 (ಮಂಗಳವಾರ).ಸಮಯ: ಪ್ರತಿದಿನ ಬೆಳಿಗ್ಗೆ 9:00 ರಿಂದ ಸಂಜೆ 4:00 ರವರೆಗೆ.
ಅರ್ಹತೆ: 5ನೇ ತರಗತಿಯಿಂದ 10ನೇ ತರಗತಿಯವರೆಗಿನ ಮಕ್ಕಳು ಭಾಗವಹಿಸಬಹುದು.
ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಹಮ್ಮಿಕೊಂಡಿರುವ ಈ ಯೋಗೋತ್ಸವದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಳಸ ಘಟಕ ಮನವಿ ಮಾಡಿದೆ.
