ಕಳಸ ಲೈವ್ ವರದಿ
ಕಳಸ ಕಲಶೇಶ್ವರ ದೇವಸ್ಥಾನದಲ್ಲಿ ಮಳೆಗಾಗಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಮಾ 15 ರಂದು ನಡೆಯಲಿದೆ.
ಅಂದು ಕಲಶೇಶ್ವರನಿಗೆ ಶತವಾರ ರುದ್ರಾಭಿಷೇಕ, ಏಕದಶರುದ್ರಹೋಮ, ಪರ್ಜನ್ಯ ಜಪ ಮತ್ತು ಪರ್ಜನ್ಯಹೋಮ ನಡೆಯಲಿದೆ. ಸರ್ವಾಂಗ ಸುಂದರಿ ಅಮ್ಮನವರ ಸನ್ನಿಧಿಯಲ್ಲಿ ಸಹಸ್ರ ಕುಂಕುಮಾರ್ಚನೆ, ಆನೆವಿಘ್ನೇಶ್ವರಸ್ವಾಮಿ ಸನ್ನಿದಿಯಲ್ಲಿ ಅಷ್ಟೋತ್ತರ, ಪಂಚಕಜ್ಜಾಯ ನಿವೇದನೆ, ಕ್ಷೇತ್ರಪಾಲ ಸನ್ನಿಧಿಯಲ್ಲಿ ಚರು ಬಲಿ ಸಮರ್ಪಣೆ ನಡೆಯಲಿದೆ.
ಮಹಾ ಪೂಜೆಯ ನಂತರ ಶ್ರೀ ಕಲಶೇಶ್ವರ ಸ್ವಾಮಿಯವರಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ ನಡೆಯಲಿದೆ.
