ಕಳಸ ಲೈವ್ ವರದಿ
ಕಳಸ ಹಾಗೂ ಕಳಸದ ಸುತ್ತಮುತ್ತಲಿನ ಜನ ಸಾಮಾನ್ಯರಿಗೊಂದು ಸುವರ್ಣಾವಕಾಶ ನೀವು ಉತ್ತಮ ಭಾಷಣಕಾರರಾಗಬೇಕೆ? ನಿಮ್ಮಲ್ಲಿರುವ ವೇದಿಕೆ ಕಂಪನ ದೂರಮಾಡಬೇಕೆ? ಇದೆಲ್ಲದಕ್ಕೂ ಉತ್ತಮ ಪರಿಹಾರವೆಂಬಂತೆ ಇದೇ ಮಾರ್ಚ್ 28ನೇ ತಾರೀಖಿನಂದು ಜೆಸಿಐ ಕಳಸ ವತಿಯಿಂದ ಪರಿಣಾಮಕಾರಿ ಭಾಷಣ ಕಲೆ ವೃದ್ಧಿಸುವ ಒಂದು ದಿನದ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರು ಮಾರ್ಚ್ 25ರೊಳಗಾಗಿ ನೊಂದಣಿ ಮಾಡಿಕೊಳ್ಳುವುದು.. ಈ ಕಾರ್ಯಗಾರದಲ್ಲಿ ಜೆಸಿಐ ಭಾರತ ರಾಷ್ಟ್ರೀಯ ತರಬೇತುದಾರರಾದ ಹಾಗೂ ಸಾಕಷ್ಟು ತರಬೇತಿ ಅನುಭವವಿರುವ ಜೇಸಿ ವೇಣುಗೋಪಾಲ್ ರವರು ತರಬೇತುದಾರರಾಗಿ ಆಗಮಿಸಿತ್ತಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಎಂದು ಕಳಸ ಜೆಸಿಐ ಸಂಸ್ಥೆಯ ಅಧ್ಯಕ್ಷ ಚರಣ್ ಭಂಡಾರಿ ತಿಳಿಸಿದ್ದಾರೆ.
ಸೂಚನೆ: ಮೊದಲು ಬಂದ 30 ಜನರಿಗೆ ಅವಕಾಶ, 30ಕ್ಕಿಂತ ಹೆಚ್ಚು ಅಭ್ಯರ್ಥಿಗಳಿಗೆ ಅವಕಾಶವಿರುವುದಿಲ್ಲ,25ನೇ ತಾರೀಖಿನ ನಂತರ ನೊಂದಣಿ ಗೆ ಅವಕಾಶವಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9480070219



