ಕಳಸ ಲೈವ್ ವರದಿ
ಇಲ್ಲಿಯ ಶ್ರೀ ಅನ್ನಪೂಣೇಶ್ವರಿ ಬಸ್ಸ್ ಮಾಲಿಕರಾದ ಕೆ.ಕೆ. ಬಾಲಕೃಷ್ಣ ಭಟ್ ಅವರಿಗೆ ಖಾಸಾಗಿ ವಾಹಿನಿ ಮತ್ತು ಪತ್ರಿಕೆ ವತಿಯಿಂದ ಕೊಡುವ ಉಜ್ವಲ ಉದ್ಯಮಿ ಪ್ರಶಸ್ತಿಯನ್ನು ಇತ್ತೀಚೆಗೆ ಮಂಗಳೂರಿನಲ್ಲಿ ಪ್ರದಾನ ಮಾಡಲಾಯಿತು.

ಕಳೆದ ಮೂವತ್ತು ವರ್ಷಗಳಿಂದ ಹಳ್ಳಿ ಹಳ್ಳಿಗೂ ಸಾರಿಗೆ ಕ್ಷೇತ್ರವನ್ನು ವಿಸ್ತರಿಸಿ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲ ಮಾಡಿಕೊಟ್ಟು ನೂರಹತ್ತಕ್ಕೂ ಹೆಚ್ಚು ಬಸ್ಸುಗಳನ್ನು ಹೊಂದಿರುವ ಹಾಗೂ ಕೆಕೆಬಿ ಎಂದೇ ಮನೆ ಮಾತಾಗಿರುವ ಕಳಸ ಬಾಲಕೃಷ್ಣ ಭಟ್ ಅವರು ಉದ್ಯಮ ಕ್ಷೇತ್ರದಲ್ಲಿ ಮಾಡಿರುವ ಗಣನೀಯ ಸಾಧನೆಗೆ ಈ ಗೌರವವನ್ನು ನೀಡಲಾಗಿದೆ.

ಪ್ರಶಸ್ತಿಯನ್ನು ಪಡೆದು ಮಾತನಾಡಿದ ಕೆ.ಕೆ.ಬಾಲಕೃಷ್ಣ ಭಟ್ ನಾನು ಇವತ್ತು ಈ ಪ್ರಶಸ್ತಿಯನ್ನು ಪಡೆಯಬೇಕಾದರೆ ಅದಕ್ಕೆ ನಿಷ್ಟಾವಂತರಾಗಿ ಕೆಲಸ ಮಾಡುವ ನೌಕರ ವರ್ಗ ಮತ್ತು ಪ್ರಯಾಣಿಕರು ಕಾರಣ. ಆದ್ದರಿಂದ ಈ ಪ್ರಶಸ್ತಿಯನ್ನು ಪ್ರಯಾಣಿಕರು ಮತ್ತು ನೌಕರ ವರ್ಗಕ್ಕೆ ಅರ್ಪಿಸುತ್ತಿದ್ದೇನೆ ಎಂದರು.


