ಕಳಸ ಲೈವ್ ವರದಿ
ಕಳಸ ತಾಲ್ಲೂಕಿನ ಮಣ್ಣಿನಪಾಲ್, ಬಲಿಗೆ ಮತದಾನ ಕೇಂದ್ರಗಳಿಗೆ ಅಧಿಕಾರಿಗಳು ಮಂಗಳವಾರ ಬೇಟಿ ನೀಡಿ ಮತದಾನ ಮಾಡುವಂತೆ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಿದರು.
ಕಳಸದ ತಹಸೀಲ್ದಾರ್ ಶ್ರೀಮತಿ ತನುಜ, ರಾಜಸ್ವ ನಿರೀಕ್ಷಕರಾದ ಶ್ರೀ ಅಜ್ಜೇಗೌಡ, ಸೆಕ್ಟರ್ ಅಧಿಕಾರಿ ಶ್ರೀ ಸೋಮಶೇಖರ ಸಿ.ಎನ್, ಪೋಲಿಸ್ ಸೆಕ್ಟರ್ ಅಧಿಕಾರಿ ಶ್ರೀ ಅಶೋಕ್ ಹಾಗೂ ಗ್ರಾಮ ಆಡಳಿತಾಧಿಕಾರಿ ಶ್ರೀ ಪ್ರಸನ್ನ ರವರು ಮೂಡಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸೆಕ್ಟರ್-03 ವಲ್ನರಬೆಲ್ ಮತಗಟ್ಟೆಗಳಾದ ಮಣ್ಣಿನಪಾಲ್ ಹಾಗೂ ಎಚ್. ಬಲಿಗೆ ಮತದಾನ ಕೇಂದ್ರಗಳಿಗೆ ಭೇಟಿ ನೀಡಿ ಎಲ್ಲ ಮತದಾರರು ಯಾವುದೇ ಆಸೆ ಆಮಿಷಗಳಿಗೆ, ಯಾರ ಒತ್ತಡಕ್ಕೂ ಒಳಗಾಗದೇ, ಮುಕ್ತವಾಗಿ, ನಿರ್ಭಿತಿಯಿಂದ ಹಾಗೂ ನ್ಯಾಯಸಮ್ಮತವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮತದಾನವನ್ನು ಯಶಸ್ವಿಗೊಳಿಸುವಂತೆ ಜಾಗೃತಿ ಮೂಡಿಸಲಾಯಿತು.

ಇದೇ ವೇಳೆ ಎಚ್. ಬಲಿಗೆ ಗ್ರಾಮಸ್ಥರು ಓಟಿಪಿ ಬರದೆ ವೋಟ್ ಇಲ್ಲ ಎಂಬ ಧ್ಯೇಯವಾಕ್ಯದೊಂದಿಗೆ ಮತದಾನವನ್ನು ಬಹಿಷ್ಕರಿಸಿರುವ ಮನವಿ ಪತ್ರವನ್ನು ಸ್ವೀಕರಿಸಲಾಯಿತು. ಸದರಿ ಮನವಿ ಪತ್ರವನ್ನು ಮುಂದಿನ ಕ್ರಮಕ್ಕಾಗಿ ತಾಲೂಕು ಚುನಾವಣಾಧಿಕಾರಿಗಳಿಗೆ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಕಳುಹಿಸಲಾಗುವುದೆಂದು ತಿಳಿಸಲಾಯಿತು.


