ಕಳಸ ಲೈವ್ ವರದಿ
ವಿದ್ಯುತ್ ಶಾಕ್ ಹೊಡೆದು ಜಾನುವಾರುಗಳು ಸತ್ತು ಹೋಗಿರುವ ಘಟನೆ ಕಳಸ ತಾಲೂಕಿನ ತನೂಡಿ ಗ್ರಾಮದ ಅಳಗೋಡು ಎಂಬಲ್ಲಿ ನಡೆದಿದೆ.
ಶನಿವಾರ ಬೆಳಿಗ್ಗೆ ಮೇಯಲು ಹೋಗಿದ್ದ ಸಿಂದಿ ದನವು ಬಾಳೆಹೊಳೆ ಸಮೀಪದ ಎಸ್ಟೇಟ್ ಒಂದರ ಬಳಿ ಇದ್ದ ಟ್ರಾನ್ಸ್ ಫಾರ್ಮನಿಂದ ವಿದ್ಯುತ್ ಶಾಕ್ ಹೊಡೆದು ನಮ್ಮ ದನದೊಂದಿಗೆ ಪಕ್ಕದ ಮನೆಯ ಎತ್ತು ಕೂಡ ಸತ್ತು ಹೋಗಿರುತ್ತದೆ.
ಈ ಬಗ್ಗೆ ಮೆಸ್ಕಾಂ ಇಲಾಖೆ ಸಿಬ್ಬಂದಿಗೆ ತಿಳಿಸಿದರೂ ಕೂಡ ಯಾವುದೇ ರೀತಿಯ ಪ್ರತಿಕ್ರೀಯೆ ನೀಡಿರುವುದಿಲ್ಲ.ಇದರಿಂದ ಇಲ್ಲಿ ಓಡಾಡುವ ಹಾಗೂ ತೋಟದಲ್ಲಿ ಕೆಲಸ ಮಾಡುವವರಿಗೆ ವಿದ್ಯುತ್ ಶಾಕ್ ತಗಲುವ ಭಯವಿದ್ದು, ಇದರ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕು ಮತ್ತು ದನ ಮತ್ತು ಎತ್ತನ್ನು ಹೂಳಲು ಪರಿಹಾರ ನೀಡಬೇಕು ಎಂದು ದನದ ಮಾಲಿಕ ಎ.ಎನ್ ಗಣೇಶ್ ಕಳಸ ಪೊಲೀಸ್ ಠಾಣೆಗೆ ದೂರಿನಲ್ಲಿ ತಿಳಿಸಿದ್ದಾರೆ.


