ಕಳಸ ಲೈವ್ ವರದಿ
ಕಳಸ ರೋಟರಿ ಸಂಸ್ಥೆ, ಇನ್ನರ್ ವೀಲ್, ಮೇರುತಿ ಸೇವಾ ಸಮಿತಿ ಮತ್ತು ಟಾಟಾ ಕಾಫಿ ಎಸ್ಟೇಟ್ ಇವರ ಸಂಯುಕ್ತಾಶ್ರಯದಲ್ಲಿ ಬಸರೀಕಟ್ಟೆ ಸಮೀಪದ ಮೇರುತಿಕಾನು ಎಸ್ಟೇಟಿನಲ್ಲಿ ರಕ್ತದಾನ ಶಿಬಿರ ನಡೆಯಿತು.
ರೋಟರಿ ಸಂಸ್ಥೆಯ ‘ಕ್ರಿಯೇಟ್ ಹೋಪ್ ಇನ್ ದಿ ವಲ್ರ್ಡ್’ ಮತ್ತು ಇನ್ನರ್ ವೀಲ್ ಸಂಸ್ಥೆಯ ‘ಶೈನ್ ಎ ಲೈಟ್’ ಯೋಜನೆಯಡಿಯಲ್ಲಿ ಈ ಶಿಬಿರವನ್ನು ನಡೆಸಲಾಯಿತು.
ಶಿಬಿರದಲ್ಲಿ ರೋಟರಿ ಪದಾಧಿಕಾರಿಗಳು ಮತ್ತು ತೋಟ ಕಾರ್ಮಿಕರು ಸೇರಿದಂತೆ ಒಟ್ಟು 42 ಜನರು ರಕ್ತದಾನ ಮಾಡಿದರು.ಶಿವಮೊಗ್ಗ ರೋಟರಿ ಬ್ಲಡ್ ಬ್ಯಾಂಕ್ ರಕ್ತದಾನ ಆಯೋಜಿಸಿತ್ತು.
ಎಸ್ಟೇಟ್ ವ್ಯವಸ್ಥಾಪಕ ಮನೋಜ್, ಸೇವಾ ಸಂಘದ ಅಧ್ಯಕ್ಷ ಕುಮಾರ್, ಕಳಸ ರೋಟರಿ ಅಧ್ಯಕ್ಷೆ ಸಾವತ್ರಿ ಜೋಷಿ, ಕಾರ್ಯದರ್ಶಿ ಪಣೀಶ್, ಇನ್ನರ್ ವೀಲ್ ಅಧ್ಯಕ್ಷೆ ಸಂಧ್ಯಾ ರಿತೇಶ್, ಕಾರ್ಯದರ್ಶಿ ನಳಿನಾಕ್ಷಿ, ಜೋನಲ್ ಲೆಫ್ಟಿನೆಂಟ್ ಕಿರಣ್ ಶೆಟ್ಟಿ ಇದ್ದರು.


