
ಕಳಸ ಲೈವ್ ವರದಿ
ಗೋಶಾಲೆಗಾಗಿ ಮೀಸಲಿಟ್ಟಿರುವ ಭೂಮಿಯನ್ನು ಒತ್ತುವರಿ ಮಾಡಲಾಗಿದೆ.ಒತ್ತುವರಿ ಮಾಡಿದ ಭೂಮಿಯನ್ನು ಕೂಡಲೇ ತೆರವುಗೊಳಿಸಿ ಗೋಶಾಲೆಗಾಗಿ ಈ ಭೂಮಿಯನ್ನು ಮಂಜೂರು ಮಾಡಿಕೊಡಬೇಕು ಎಂದು ವಿಶ್ವಹಿಂದೂ ಪರಿಷತ್ ಭಜರಂಗದಳ ಜಿಲ್ಲಾ ಸಂಯೋಜಕ್ ಅಜಿತ್ ಕುಲಾಲ್ ಒತ್ತಾಯಿಸಿದ್ದಾರೆ.

ಈ ಬಗ್ಗೆ ಕಳಸ ತಹಶೀಲ್ದಾರ್ ಅವರಿಗೆ ಮನವಿ ಮಾಡಿಕೊಂಡಿದ್ದು ಕಳಸ ತಾಲ್ಲೂಕಿನ ಮಾವಿನಕೆರೆ ಗ್ರಾಮ ಸ.ನಂ 496ರಲ್ಲಿ 56 ಎಕರೆ ಗೋಮಾಳ ಜಾಗವಿದ್ದು, ಈ ಭೂಮಿಯಲ್ಲಿ 36 ಎಕರೆ ಉಳಿಕೆ ಭೂಮಿಯಿದ್ದು, ಈ ಭೂಮಿಯನ್ನು ಗೋಶಾಲೆಗಾಗಿ ಮೀಸಲಿರಿಸುವಂತೆ ಈ ಹಿಂದೆ ಮನವಿ ಮಾಡಿದ್ದೇವು.ಈ ಭೂಮಿಯನ್ನು ಸರ್ವೆ ನಡೆಸಿ ಅರಣ್ಯ ಇಲಾಖೆಯವರ ಅನುಮತಿಗಾಗಿಯೂ ಕೇಳಿರುತ್ತೀರಿ.

ಆದರೆ ಈಗ ಈ 36 ಎಕರೆ ಭೂಮಿಯನ್ನು ಖಾಸಾಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು ಬೇಲಿಯನ್ನು ನಿರ್ಮಿಸಿ ಭೂಮಿಯನ್ನು ಕಬಳಿಸುವ ಹುನ್ನಾರ ನಡೆಸುತ್ತಿದ್ದಾರೆ.
ಆದ್ದರಿಂದ ಈ ಭೂಮಿಯನ್ನು ಗೋಶಾಲೆ ನಿರ್ಮಿಸಲು ಮೀಸಲಿರಿಸಿ, ಒಂದು ತಿಂಗಳ ಒಳಗಾಗಿ ಈ ಭೂಮಿಯನ್ನು ಮಂಜೂರು ಮಾಡಿಕೊಡಬೇಕು ಎಂದು ಮನವಿಯಲ್ಲಿ ಕೇಳಿಕೊಂಡಿದ್ದಾರೆ.
