
ಕಳಸ ಲೈವ್ ವರದಿ
ಸಂಸೆ ಶ್ರೀ ಎಡಮುರೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಮಾರ್ಚ್ 8ರಂದು ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ಅಂದು ಶ್ರೀ ಎಡಮುರೇಶ್ವರಸ್ವಾಮಿಗೆ ಬೆಳಿಗ್ಗೆ 10-00 ಗಂಟೆಗೆ ಪುಣ್ಯಾಹವಾಚನ, ಕಲಾಸಾನಿಧ್ಯ ಹೋಮ, ಮತ್ತು ಕಲಶಾಭಿಷೇಕ, ಮಹಾಪೂಜೆ ಮಂಗಳಾರತಿ ನಡೆಯಲಿದೆ.
ರಾತ್ರಿ 10-30ಕ್ಕೆ ಶ್ರೀ ಸ್ವಾಮಿಯವರಿಗೆ ರುದ್ರಾಭಿಷೇಕ, ರಂಗಪೂಜೆ, ದೀಪಾರಾಧನೆ, ತೀರ್ಥಪ್ರಸಾದ ವಿನಿಯೋಗ. ನಂತರ ಊರಿನ ಗ್ರಾಮಸ್ಥರ ಪರವಾಗಿ ಕಪ್ಪಿನಭೂತ, ಒಚಿಟಿ ಪಂಜುರ್ಲಿ, ಹೊಸಮಕ್ಕಿ ಭೂತ ಮತ್ತು ಬೆಳ್ಳದ ಚೌಂಡಿ ದೈವಗಳ ನೇಮೋತ್ಸವ ಇರಲಿದೆ.
ಮಾಚ್9 ರ ಶನಿವಾರದಂದು ಬೆಳಿಗ್ಗೆ 10-30ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಂತರ ಮಹಾ ಮಂಗಳಾರತಿ, ಅನ್ನ ಸಂತರ್ಪಣೆ ನಡೆಯಲಿದೆ.
ಸತ್ಯನಾರಾಯಾಣ ಪೂಜೆ ಮಾಡಿಸುವ ಭಕ್ತಾದಿಗಳು ಒಂದು ದಿನ ಮುಂಚಿತವಾಗಿ ಸಮಿತಿಯವರಿಗೆ ತಿಳಿಸಿ, ನಿಗದಿತ ಕಾಲಕ್ಕೆ ಸರಿಯಾಗಿ ಪೂಜೆಗೆ ಬಂದು ಸಹಕರಿಸಬೇಕೆಂದು ಶ್ರೀ ಎಡಮುರೇಶ್ವರಸ್ವಾಮಿ ದೇವಸ್ಥಾನದ ಆಡಳಿತ ಸಮಿತಿ ತಿಳಿಸಿದೆ.
