

ಕಳಸ ಲೈವ್ ವರದಿ
ಕಳಸದ ಯಡದಾಳು ಗ್ರಾಮದಲ್ಲಿ ಶ್ರೀ ಕಾಳಿಕಾಂಬಾ ದೇವರ ನೂತನ ಶಿಲಾಮಯ ದೇವಸ್ಥಾನದ ಉದ್ಘಾಟನೆ ಪುನಃ ಪ್ರತಿಷ್ಠೆ, ಅಷ್ಟಬಂಧ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಅತ್ಯಂತ ಶ್ರದ್ಧಾ ಭಕ್ತಿ ಹಾಗೂ ವಿಜ್ರಂಭಣೆಯಿಂದ ನೆರವೇರಿತು.
ಶುಕ್ರವಾರ ಹಾಸನ ಅರೇಮಾದನಹಳ್ಳಿ ಶ್ರೀ ವಿಶ್ವಕರ್ಮ ಜಗದ್ಗುರು ಪೀಠ, ವಿಶ್ವಬ್ರಾಹ್ಮಣ ಮಹಾಸಂಸ್ಥಾನಮಠದ ಅನಂತಶ್ರೀವಿಭೂಷಿತ ಶಿವಸುಜ್ಞಾನತೀರ್ಥ ಮಹಾಸ್ವಾಮಿ, ಹೊರನಾಡು ಅನ್ನಪೂರ್ಣೇಶ್ವರೀ ಕ್ಷೇತ್ರದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ, ರಾಜಲಕ್ಷ್ಮೀ ಜೋಷಿ ಇವರ ಉಪಸ್ಥಿತಿ ಹಾಗೂ ವೇ||ಬ್ರ||ಶ್ರೀ ರಾಜಗೋಪಾಲಾಚಾರ್ಯ, ವೈಖಾನಸ ಆಗಮ ಪ್ರವೀಣ ಬೀರೂರು ಇವರ ಪ್ರಧಾನ ಆಚಾರ್ಯತ್ವದಲ್ಲಿ ಶ್ರೀಕಾಳಿಕಾಂಬಾ ದೇವಿಗೆ ಬ್ರಹ್ಮಕಲಶೋತ್ಸವ ಸಮಾರಂಭ ನೆರವೇರಿತು. ಶ್ರೀದೇವಿಗೆ ಮಹಾಕುಂಭಾಭಿಷೇಕ, ದೇವಾಲಯದ ಕಲಶ ಪ್ರತಿಷ್ಠೆ, ಕಲಶಾರಾಧನೆ, ಉಕ್ತ ಹೋಮಗಳು, ಶ್ರೀ ಚಂಡಿಕಾ ಹೋಮ, ರಕ್ಷಾಧಾರಣೆ, ಬಲಿಹರಣ, ಮಂಗಳದ್ರವ್ಯ ದರ್ಶನ, ಕದಲೀಚ್ಛೇದನ, ಅಷ್ಟಾವಧಾನ, ಮಹಾನಿವೇದನೆ ಮುಂತಾದ ಪೂಜಾ ವಿಧಿ ವಿಧಾನಗಳು ನೆರವೇರಿದವು.

ನಂತರ ನಡೆದ ಸಭಾ ಕಾರ್ಯಕ್ರಮದಲಿ ಶ್ರೀ ವಿಶ್ವಕರ್ಮ ಜಗದ್ಗುರು ಪೀಠ, ವಿಶ್ವಬ್ರಾಹ್ಮಣ ಮಹಾಸಂಸ್ಥಾನಮಠದ ಅನಂತಶ್ರೀವಿಭೂಷಿತ ಶಿವಸುಜ್ಞಾನತೀರ್ಥ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎ.ಜಿ. ವಾಸುದೇವ ಆಚಾರ್ಯ ಆಳಗೋಡು, ಉಡದಾಳು ಶ್ರೀಕಾಳಿಕಾಪರಮೇಶ್ವರೀ ವಿಶ್ವಕರ್ಮ ಸೇವಾಸಂಘದ ಅಧ್ಯಕ್ಷ ಎ.ಎನ್.ಪುಟ್ಟಾ ಆಚಾರ್ಯ, ಗೌರವಾಧ್ಯಕ್ಷ ನಾರಾಯಣ ಆಚಾರ್ಯ, ಕಳಸ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಮಿತಿ ಅಧ್ಯಕ್ಷ ಪಿ.ಎ ಕುಮಾರ ಸ್ವಾಮಿ, ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ವಿಶ್ವನಾಥ, ಸದಸ್ಯೆ ಶ್ರೀಮತಿ ಶ್ರೀಮತಿ, ಸುಜಯಸದಾನಂದ ಮುಖಂಡ ನಾಗಭೂಷಣ ಶಂಭುವಿನಹಿತ್ಲು ಇತರರು ಇದ್ದರು.

ರಾತ್ರಿ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಗುತ್ಯಮ್ಮ ಪ್ರಸಾದಿತ ಯಕ್ಷಗಾನ ಮಂಡಳಿ, ಸೀತೂರು ಇವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗ ನಡೆಯಿತು.

